ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿ: ಸಂದೀಪ್ ಹರಿವಿನಂಗಡಿ

0
88

ಚಿಕ್ಕಮಗಳೂರು: ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿ, ಅವರ ಸ್ಫೂರ್ತಿಯ ಮಾತುಗಳು ಇಂದಿಗೂ ಕೂಡ ಹಲವರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಹರಿವಿನಂಗಡಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 39ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ ತರುಣನ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ದೇಶಕಂಡ ವೀರ, ಅಪ್ರತಿಮ ಚಿಂತಕ, ಆಧ್ಯಾತ್ಮ ಜೀವಿ ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ರಾಷ್ಟ್ರೀಯತೆಯನ್ನು ದೇಶ ವಿದೇಶಗಳಲ್ಲಿ ಪ್ರಚಲಿತಗೊಳಿಸಿ ಯುವಕರಲ್ಲಿ ದೇಶಸೇವೆಯ ಬಗ್ಗೆ ಸನಾತನ ಧರ್ಮದ ಬಗ್ಗೆ ಸ್ಪೂರ್ತಿಯನ್ನು ತುಂಬಿದರು.

ಜಿಲ್ಲೆಯು ಪೆರುಮಾಳರವರು ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮಿ ವಿವೇಕಾನಂದರ ಹೆಸರನ್ನು ಮಂಡನೆ ಮಾಡಿ, ಆರ್ಥಿಕ ಸಹಾಯವನ್ನು ಮಾಡಿ ಭಾರತ ದೇಶವನ್ನು ವಿಶ್ವಧರ್ಮ ಸಮ್ಮೇಳನದಲ್ಲಿ ಮೆರಗುವಂತೆ ಮಾಡುವಲ್ಲಿ ಚಿಕ್ಕಮಗಳೂರಿನ ಪೆರುಮಾಳರವರು ಕಾರಣ ಎಂದರು ತಿಳಿಸಿದರು. ಸ್ವಾರ್ಥ ಬಿಟ್ಟು ಸಾಮಾಜಿಕ ಚಿಂತನೆಗಳನ್ನು ಮಕ್ಕಳಲ್ಲಿ ಮೈಗೂಡಿಸಬೇಕು, 15 ವರ್ಷಕ್ಕಿಂತ ಮಕ್ಕಳು ಶೇ.29 ದೇಶದಲ್ಲಿದ್ದಾರೆ. ಅವರನ್ನು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದೇಶ ಕಟ್ಟಲು ಪ್ರೇರೆಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಪ್ರೇಮ್‍ಕುಮಾರ್ ಮಾತನಾಡಿ, ರಾಮಕೃಷ್ಣ ಪರಮಹಂಸರ ವಿಚಾರಗಳ ಪ್ರೇರಣೆಯಿಂದ ಸನ್ಯಾಸತ್ವನ್ನು ಸ್ವೀಕರಿಸಿದ ಸ್ವಾಮಿ ವಿವೇಕಾನಂದರು ಸಮಾಜದಲ್ಲಿ ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುವುದರ ಜೊತೆಗೆ ದೇಶವನ್ನು ಒಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆ. ಅವರು ಅವರ ಭಾಷಣಗಳ ಜೊತೆಗೆ ಪ್ರಪಂಚದ ಹಲವು ಭಾಗಗಳಲ್ಲಿ ಸಂಚರಿಸಿ ಅಲ್ಲಿನ ವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡಿ ಭಾರತವನ್ನು ವಿಶ್ವಮಟ್ಟದಲ್ಲಿ ಗುರತಿಸುವಂತೆ ಮಾಡುತ್ತಾರೆ. ಜೊತೆಗೆ ಹಲವು ಯುವಕರಿಗೂ ದಾರಿ ದೀಪವಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷರಾದ ಮಧುಕುಮಾರ್, ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ಯುವಮೋರ್ಚಾ ಉಪಾಧ್ಯಕ್ಷರಾದ ಸಚಿನ್, ಶಶಿ ಆಲ್ದೂರ್, ಸಂತೋಷ್, ಆದರ್ಶ್, ಕೌಶಿಕ್, ಮನೋಹರ್ ಹಾಗೂ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here