ಸ್ವಾರ್ಥ ಮನೋಭಾವನೆಯಿಂದಾಗಿ ಸಂಬಂಧಗಳು ಜೀವನದ ವೈರಸ್‌ಗಳಾಗುತ್ತಿವೆ: ಡಾ. ಜಿ. ಪ್ರಶಾಂತ ನಾಯಕ

0
458

ರಿಪ್ಪನ್‌ಪೇಟೆ: ಸ್ವಾರ್ಥ ಮನೋಭಾವನೆಯಿಂದ ಸಂಬಂಧಗಳು ಜೀವನದ ವೈರಸ್‌ಗಳಾಗುತ್ತಿವೆ. ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಎಂಬ ಸಂಸಾರದ ಸಂಸ್ಕೃತಿ ಮನುಷ್ಯ ಸಂಬಂಧಗಳು ದೂರವಾಗುತ್ತಿವೆ ಎಂದು ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರು, ಸಾಹಿತಿಗಳು ಹಾಗೂ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ ನಾಯಕ ವಿಷಾದ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆಯ ಜಿಎಸ್‌ಬಿ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಜಾನಪದ ಪರಿಷತ್ತುಗಳ ತಾಲ್ಲೂಕು ಸಮಿತಿ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 194ನೇ ಸಾಹಿತ್ಯ ಹುಣ್ಣಿಮೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಮಾಯಾವಾಗುತ್ತಿವೆ, ಸಮಾಜ ತಿದ್ದುವ ಕೆಲಸ ಮೇಷ್ಟ್ರುಗಳದೆಂಬ ಕಾಲವೊಂದು ಇತ್ತು ಅದು ಇಲ್ಲದ ಸ್ಥಿತಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಒಬ್ಬ ಅಧ್ಯಾಪಕನಾಗುವುದು ಆಧ್ಯಾಪಕ ತನ್ನ ವಿದ್ಯಾರ್ಥಿಗಳಿಂದ ನಿರಂತರ ಮೇಷ್ಟ್ರು ಅನ್ನಿಸಿಕೊಳ್ಳುವುದು ಬಹಳ ದೊಡ್ಡದು ಸಾಂಸ್ಕೃತಿಕ ಲೋಕದಲ್ಲಿಯೂ ಒಬ್ಬ ಮೇಷ್ಟ್ರಾಗಿ ಗುರುತಿಸಿಕೊಳ್ಳುವ ಪ್ರಯತ್ನ ನಾವು ಮಾಡುತ್ತಿರುವುತ್ತೇವೆ. ಗುರುವೇ ನಮಃ ಎಂಬ ನೆಲ ನಮ್ಮದು ಆದರೆ ಪ್ರಸ್ತುತ ಗುರುವೇನು ಮಹಾ ಎಂಬ ಕಾಲಘಟ್ಟದಲ್ಲಿ ನನ್ನದೇ ಒಬ್ಬ ಶಿಷ್ಯ ಅಧ್ಯಕ್ಷತೆ ವಹಿಸುವುದು ಕವಿತೆ ವಾಚಿಸುವುದು ಭಾಷಣ ಮಾಡುವುದು ಕೇಳಿದಾಗ ಅದಕ್ಕಿಂತ ಶ್ರೇಷ್ಟ್ರವಾದುದು ಗುರುವಿಗೆ ಬೇರೆನೂ ಬೇಕಿಲ್ಲ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಮತ್ತು ಹಿರಿಯ ಸಾಹಿತಿಗಳಾದ ಡಾ.ಶಾಂತಾರಾಂ ಪ್ರಭು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ, ರೋಟರಿ ಕ್ಲಬ್ ಅಧ್ಯಕ್ಷ ಆರ್.ಎನ್.ನಾಗಭೂಷಣ, ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಎನ್.ಮಂಜುನಾಥ ಕಾಮತ್, ಲೇಖಕಿ ಕು.ರಚನಾ ಕಾಮತ್, ಡಾ.ಅಂಜಲಿ, ಕೆಸವಿನಮನೆ ರತ್ನಾಕರ್ ಇತತರರು ಭಾಗವಹಿಸಿ ಮಾತನಾಡಿದರು.

ಕುಮಾರಿ ಅಂಕಿತಾ ಪ್ರಾರ್ಥಿಸಿದರು. ಕುಸುಗುಂಡಿ ನಾಗರಾಜ್ ಸ್ವಾಗತಿಸಿದರು.

ನಂತರ ಸ್ವರಚಿತ ಕವನ ವಾಚನ ಮತ್ತು ವಿವಿಧ ಜಾನಪದ ಯಕ್ಷಗಾನ, ಏಕಪಾತ್ರಾಭಿನಯ, ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

ಜಾಹಿರಾತು

LEAVE A REPLY

Please enter your comment!
Please enter your name here