ಹಗಲಿನಲ್ಲೂ ಉರಿಯುತ್ತಿರುವ ಬೀದಿ ದೀಪಗಳು: ಸ್ಧಳೀಯರ ಆಕ್ರೋಶ

0
353

ಕೊಪ್ಪ: ತಾಲೂಕಿನ ಜಯಪುರ ನಗರದ ಬಸ್ಸು ನಿಲ್ದಾಣ ಹಾಗೂ ಸುತ್ತಮುತ್ತಲಿನ ಬೀದಿ ದೀಪಗಳು ಹಗಲಿನಲ್ಲಿ ಉರಿಯುತ್ತಿದ್ದು ಇದರ ಬಗ್ಗೆ ಗ್ರಾಮ ಪಂಚಾಯಿತಿ ಗಮನಹರಿಸದಿರುವುದು ಶೋಚನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಸಮಯದಲ್ಲಿ ಪಾದಾಚಾರಿಗಳಿಗೆ ಅನುಕೂಲವಾಗಲೆಂದು ನಗರದಲ್ಲಿ ಬೀದಿ ದೀಪಗಳು ಅಳವಡಿಸಿದ್ದು ಇದರ ಸರಿಯಾದ ನಿರ್ವಹಣೆ ಮಾಡದೆ ಇರುವ ಕಾರಣದಿಂದಲೋ ಅಥವಾ ಇನ್ಯಾವುದೋ ಸಮಸ್ಯೆಯಿಂದಲೂ ಹಗಲಿನಲ್ಲಿಯೂ ವಿದ್ಯುತ್ ದೀಪಗಳು ಉರಿಯುತ್ತಿದ್ದು, ಪ್ರಸ್ತುತ ವಿದ್ಯುತ್ ಕೊರತೆ ಸಮಸ್ಯೆಯ ಸಂದರ್ಭದಲ್ಲಿ ಈ ರೀತಿ ವಿದ್ಯುತ್ ವ್ಯರ್ಥವಾದರೆ ರಾತ್ರಿಯ ಸಮಯದಲ್ಲಿ ವಿದ್ಯುತ್ ನೀಡುವುದು ಕಷ್ಟವಾಗಬಹುದು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಮನಹರಿಸಬೇಕು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here