ಹಣದ ಬೆನ್ನು ಹತ್ತದೇ ಜನರ ಆರೋಗ್ಯ ಸೇವೆಗೆ ಮುಂದಾದ ನಮ್ಮೂರಿನ ವೈದ್ಯ ಡಾ.ಕಿರಣ್

0
783

ರಿಪ್ಪನ್‌ಪೇಟೆ: ಎಂ.ಬಿ.ಬಿ.ಎಸ್.ವ್ಯಾಸಂಗ ಮಾಡಿದ ತಕ್ಷಣ ಅಮೇರಿಕಾ ಇನ್ನಿತರ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಲು ಹೋಗುವವರೆ ಇತ್ತೀಚೆಗೆ ಹೆಚ್ಚಾಗಿರುವ ಕಾಲಘಟ್ಟದಲ್ಲಿ ಮತ್ತು ಸರ್ಕಾರಿ ಕೆಲಸ ಸಿಕ್ಕು ಹಣ ಮಾಡುವುದನ್ನೇ ಗುರಿಯನ್ನಾಗಿಸಿಕೊಳ್ಳುವ ಕಾಲದಲ್ಲಿ ನಮ್ಮೂರಿನ ಯುವ ವೈದ್ಯಧಿಕಾರಿಯೊಬ್ಬರು ಸಿಕ್ಕ ಎರಡು ಅವಕಾಶವನ್ನು ತಿರಸ್ಕರಿಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡಿ ಜನಪ್ರಿಯತೆ ಗಳಿಸುವುದರೊಂದಿಗೆ ನಮ್ಮೂರಿನಲ್ಲಿ ಕ್ಲಿನಿಕ್ ಆರಂಭಿಸಿರುವ ಡಾ.ಕಿರಣ್ ಕಾರ್ಯವನ್ನು ಮಳಲಿಮಠದ ಡಾ.ಷ.ಬ್ರ.ಗುರುನಾಗಭೂಷಣ ಶಿವಾಚಾರ್ಯರು ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಪ್ರಸಂಶಿಸಿ ಅಭಿನಂದಿಸಿ ಆಶೀರ್ವದಿಸಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ ನೂತನವಾಗಿ ಆರಂಭಿಸಲಾದ ಕಿರಣ್ ಹೆಲ್ತ್ ಸೆಂಟರ್‌ ಉದ್ಘಾಟಿಸಿ ಆಶೀರ್ವಚನ ನೀಡಿ, ದುಡಿಮೆ ಮಾಡಲು ತಂದೆ-ತಾಯಿ ಕುಟುಂಬವರ್ಗವನ್ನು ಬಿಟ್ಟು ವಿದೇಶಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಾಗಿರುವಾಗ ಕೆಲವರು ಸರ್ಕಾರಿ ಉದ್ಯೋಗಕ್ಕಾಗಿ ಹಪಾಹಪಿಸುವ ಇಂತಹ ಕಾಲದಲ್ಲಿ ಸರ್ಕಾರಿ ವೃತ್ತಿಗೆ ಮತ್ತು ವಿದೇಶಗಳಿಗೆ ಹೋಗದೇ ಸಿಕ್ಕ ಎರಡು ಅವಕಾಶವನ್ನು ತಿರಸ್ಕರಿಸಿ ಗ್ರಾಮೀಣ ಪ್ರದೇಶದಲ್ಲಿನ ಬಡರೈತ ನಾಗರೀಕರ ಆರೋಗ್ಯ ಸೇವೆಗಾಗಿ ಗ್ರಾಮೀಣ ಪ್ರದೇಶದ ರಿಪ್ಪನ್‌ಪೇಟೆಯಲ್ಲಿ ತಮ್ಮ ಸೇವಾ ಸೌಲಭ್ಯವನ್ನು ನೀಡಲು ಮುಂದಾಗಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸೌಮ್ಯ ಸ್ವಭಾವದ ಡಾ.ಕಿರಣ್‌ಶಾಸ್ತ್ರಿಯವರ ಸೇವೆ ಎಲ್ಲರಿಗೆ ಮಾದರಿಯಾಗಲೇದು ಆಶಿಸಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತಾನಾಡಿ, ವೈದ್ಯರಾಗುತ್ತಿದ್ದಂತೆ ದೊಡ್ಡದೊಡ್ಡ ಪಟ್ಟಣಗಳಲ್ಲಿ ಆಸ್ಪತ್ರೆಗಳನ್ನು ನರ್ಸಿಂಗ್ ಹೋಂ ಆರಂಭಿಸಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹಲವು ತಪಾಸಣೆ ಹೆಸರಿನಲ್ಲಿ ಸುಲಿಗೆ ಮಾಡುವವರೆ ಹೆಚ್ಚಾಗಿರುವಾಗ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ ಕಡಿಮೆ ಖರ್ಚಿನಲ್ಲಿ ರೋಗಿಗಳ ಚಿಕಿತ್ಸೆಗೆ ಮುಂದಾಗುತ್ತಿರುವ ವೈದ್ಯರ ಸೇವೆ ಇನ್ನೊಬ್ಬರಿಗೆ ಮಾದರಿಯಾಗಲೇಂದು ಹರಸಿದರು.

ಈ ಸಂದರ್ಭದಲ್ಲಿ ಜಿ.ಕೆ.ಅನಂತಶಾಸ್ತ್ರಿ, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಗಣೇಶ್ ಎನ್.ಕಾಮತ್, ಜಿ.ಎಸ್.ಚಂದ್ರಪ್ಪ, ಎಲ್.ವೈ.ದಾನೇಶಪ್ಪ, ಸಾಗರ ನಗರಸಭೆ ವಿರೋಧಪಕ್ಷದ ನಾಯಕ ಗಣಪತಿ ಮಂಡಗಳಲೇ, ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್ ದೇವಾನಂದ್, ಕೆ.ಆರ್.ಭೀಮರಾಜ್‌ಗೌಡ, ಮುಡುಬ ಧರ್ಮಪ್ಪ, ಗ್ರಾ.ಪಂ.ಸದಸ್ಯ ಡಿ.ಈ.ಮಧುಸೂಧನ್, ಹಿರಿಯ ನಿವೃತ್ತ ಪತ್ರಕರ್ತ ಎಸ್.ಜಿ.ರಂಗನಾಥ ಅರಸಾಳು, ಆರ್.ಹೆಚ್.ರಂಗಪ್ಪ, ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ಎನ್.ವರ್ತೇಶ್, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ, ಉಲ್ಲಾಸ್ ಹೆಚ್.ಎನ್.ಉಮೇಶ್, ಜಯಪ್ರಕಾಶ್‌ ಜಂಬಳ್ಳಿ, ಜೆ.ಎಂ.ಶಾಂತಕುಮಾರ್, ಸಂತೋಷ ಹುಂಚ, ಶ್ರೀಧರ, ಚಿಂಟು ಹಾಲುಗುಡ್ಡೆ ಇನ್ನಿತರರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here