ಹಣದ ವಿಚಾರವಾಗಿ ಕತ್ತಿಯಿಂದ ಕಡಿದು ಯುವಕನ ಬರ್ಬರ ಹತ್ಯೆ !!

0
615

ನರಸಿಂಹರಾಜಪುರ: ಹಣದ ವಿಚಾರವಾಗಿ ಕಲಹ ಉಂಟಾಗಿ ಕತ್ತಿಯಿಂದ ಕಡಿದು ಯುವಕನನ್ನು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ತಾಲ್ಲೂಕಿನ ಮೆಣಸೂರು ಗ್ರಾಮದಲ್ಲಿ ನಡೆದಿದೆ.

ಬಾಬು ಮತ್ತು ಶಿರೀಶ್ ಎಂಬುವವರ ನಡುವೆ ಹಣದ ಕುರಿತಾಗಿ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿದ್ದು ಬಾಬು ಕತ್ತಿಯಿಂದ ಶಿರೀಶ್ ತಲೆಗೆ ಹೊಡೆದು ಪರಾರಿಯಾಗಿದ್ದನೆ. ಗಂಭೀರವಾಗಿ ಗಾಯಗೊಂಡ ಆತನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಿರೀಶ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಡೆಸುತ್ತಿದ್ದ ಯುವಕ ಶಿರೀಶ್ ಅವಿವಾಹಿತನಾಗಿದ್ದು ಕುಟುಂಬಕ್ಕೆ ಆಸರೆಯಾಗಿದ್ದ. ಹಣದ ಸಲುವಾಗಿ ಏರ್ಪಟ್ಟ ಕಲಹ ಓರ್ವನ ಸಾವಿನಲ್ಲಿ ಅಂತ್ಯಕಂಡಿದ್ದು ಈ ಸಂಬಂಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here