ಹಣ, ಬಂಗಾರ ತರುವಂತೆ ಹೆಂಡತಿಗೆ ಪೀಡನೆ ; ಚಾಕುವಿನಿಂದ ಚುಚ್ಚಿ ಹತ್ಯೆ !

0
367

ಶಿವಮೊಗ್ಗ: ಹಣ, ಬಂಗಾರ ತರುವಂತೆ ಹೆಂಡತಿಗೆ ಪೀಡಿಸಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತುಂಗಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ದುಮ್ಮಳ್ಳಿ ಗ್ರಾಮದ ವಾಸಿಯಾದ ಕರುಣಾಕರ (36) ಈತನಿಗೆ 02 ವರ್ಷದ ಹಿಂದೆ ಅಮಿತಾ (27) ಇವರನ್ನು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಸಮಯದಲ್ಲಿ ಬಂಗಾರ ಮತ್ತು ಹಣವನ್ನು ಕೊಟ್ಟಿದ್ದರೂ ಕೂಡ, ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರವನ್ನು ತರುವಂತೆ ಹೆಂಡತಿಗೆ ಪೀಡಿಸುತ್ತಿದ್ದು, ಕೊಡಲು ಸಾಧ್ಯವಾಗದೇ ಇದ್ದುದರ ದ್ವೇಶದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆರೋಪಿ ಕರುಣಾಕರನು ದುಮ್ಮಳ್ಳಿಯ ವಾಸದ ಮನೆಯಲ್ಲಿ ಆತನ ಹೆಂಡತಿಯಾದ ಅಮಿತಾಳ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಕಲಂ 498A,304B,302 ಐಪಿಸಿ ಮತ್ತು ಕಲಂ 3 ಮತ್ತು 4 DOWRY PROHIBITION ACT, 1961 ರೀತ್ಯಾ ಪ್ರಕರಣ ದಾಖಲಿಸಿ ಆರೋಪಿ ಕರುಣಾಕರನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here