ಹನಿ ನೀರಾವರಿ ಪದ್ದತಿಯಿಂದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ: ಚಿನ್ಮಯಿ ಭಟ್

0
462

ರಿಪ್ಪನ್‌ಪೇಟೆ: ರೈತರು ತಮ್ಮ ಅಡಿಕೆ ಮತ್ತು ಬಾಳೆಯ ತೋಟದಲ್ಲಿನ ಬೆಳೆಗೆ ಸಕಾಲದಲ್ಲಿ ನೀರನ್ನು ಹೆಚ್ಚು ಬಳಸದೆ ಮಿತವಾಗಿ ಕೊಡುವುದರಿಂದ ಬೆಳೆಯಲ್ಲಿ ಪ್ರಗತಿ ಕಾಣಬಹುದು ಎಂದು ಜೈನ್ ಇರಿಗೇಷನ್ ವ್ಯವಸ್ಥಾಪಕ ಚಿನ್ಮಯಿ ಭಟ್ ವಿವರಿಸಿದರು.

ಜಂಬಳ್ಳಿ ಗ್ರಾಮದ ಜೆ.ಎಂ.ಶಾಂತಕುಮಾರ್ ಅಡಿಕೆ ತೋಟದಲ್ಲಿ ಅಳವಡಿಸಲಾಗಿರುವ ಜೈನ್ ಕಂಪನಿಯ ಹನಿ ನೀರಾವರಿ ಪೈಪ್ ಅಳವಡಿಕೆ ಪ್ರಾತ್ಯಕ್ಷಿಕೆಯಿಂದ ಆಗುತ್ತಿರುವ ಬದಲಾವಣೆಯ ಕುರಿತು ರೈತರೊಂದಿಗೆ ಸಂವಾದ ನಡೆಸಿ, ಇತ್ತೀಚಿನ ವರ್ಷದಲ್ಲಿ ಕಂಪನಿಯ ಹೊಸ-ಹೊಸ ಆವಿಷ್ಕಾರಗಳನ್ನು ರೈತ ಸಮುದಾಯಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು ರೈತರು ಕಂಪನಿಯ ಉಪಕರಣಗಳನ್ನು ಖರೀದಿಸಿ ಬಳಸುವುದರಿಂದಾಗಿ ಹೆಚ್ಚು ಉಪಯೋಗವಾಗುವುದು ಅಲ್ಲದೆ ಕಂಪನಿಯ ಉಪಕರಣಗಳಿಂದ ತಾಂತ್ರಿಕ ದೋಷಗಳು ಕಂಡು ಬಂದಲ್ಲಿ ಹತ್ತಿರದ ಡಾಲರ್ಸ್ ಗಳ ಬಳಿ ತಿಳಿಸಿದರೆ ತಕ್ಷಣ ಸ್ಪಂದಿಸುವುದರೊಂದಿಗೆ ಯಂತ್ರಗಳಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜೈನ್ ಇರಿಗೇಷನ್ ಕಂಪನಿಯ ಉಪವ್ಯವಸ್ಥಾಪಕ ಗಿರೀಶ್‌ ಹಾಲಪ್ಪ, ರೈತರು ಬೆಳೆಗಳಿಗೆ ಸಕಾಲದಲ್ಲಿ ನೀರು ಕೊಡುವುದು ಮತ್ತು ಆದಷ್ಟು ಅಂತರ ಬೇಸಾಯ ಕ್ರಮ ಅಳವಡಿಸುವುದರಿಂದಾಗಿ ಹೆಚ್ಚು ಇಳುವರಿ ಪಡೆಯಲು ಸಾಧ್ಯವೆಂದ ಅವರು, ಮಣ್ಣಿನಲ್ಲಿನ ಕೊರತೆಯನ್ನು ಪರೀಕ್ಷಿಸಿ ಅದಕ್ಕೆ ಬೇಕಾಗುವಂತಹ ಪೋಷಕಾಂಶವನ್ನು ಹಾಕುವುದಿಂದ ಫಸಲು ಹೆಚ್ಚು ಬೆಳೆದು ಇಳುವರಿಯಲ್ಲಿ ಲಾಭ ಹೊಂದಲು ಸಾಧ್ಯವೆಂದರು.

ಜಂಬಳ್ಳಿ ಶಿವಾನಂದಪ್ಪಗೌಡ ಮತ್ತು ಜೆ.ಎಂ.ಶಾಂತಕುಮಾರು ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

ಜೆ.ಎಂ.ಶಾಂತಕುಮಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here