ಹರತಾಳು, ಗರ್ತಿಕೆರೆ, ಭೈರಾಪುರದಲ್ಲಿ ಆ. 12 ರಿಂದ 14 ರವರೆಗೆ ಶ್ರೀ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ

0
214

ರಿಪ್ಪನ್‌ಪೇಟೆ: ಸಮೀಪದ ಹರತಾಳು, ಗರ್ತಿಕೆರೆ, ಭೈರಾಪುರ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 12 ರಿಂದ 14 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಆಗಸ್ಟ್ 12 ರಂದು ಶುಕ್ರವಾರ ಗುರುಸಾರ್ವಭೌಮರ ಸನ್ನಿಧಿಯಲ್ಲಿ ಪೂರ್ವಾರಾಧನೆ, ಆಯುತ ಸಂಖ್ಯಾ ಗಾಯಿತ್ರ ಹವನ ಹಾಗೂ ತೀರ್ಥ ಪ್ರಸಾದ ವಿತರಣೆ, ಆಗಸ್ಟ್ 13 ರಂದು ಗುರುಸಾರ್ವಭೌಮರ ಪುಣ್ಯಾರಾಧನೆ ವಿಶೇಷ ಅಷ್ಟಾಕ್ಷರಿ ಹವನ ಪೂಜೆ ತೀರ್ಥ – ಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ, ಆಗಸ್ಟ್ 14 ರಂದು ಉತ್ತರಾರಾಧನೆ ಪವಮಾನ ಹವನ ಹಾಗೂ ಪೂರ್ಣಾಹುತಿ, ರಾಯರಿಗೆ ಮಹಾಪೂಜೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ಜರುಗಲಿದ್ದು ಸಕಲ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುರಘವೇಂದ್ರರ ದರ್ಶನಾಶೀರ್ವಾದ ಪಡದುಕೊಳ್ಳುವಂತೆ ಮಠದ ಪ್ರಕಟಣೆ ತಿಳಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here