23.2 C
Shimoga
Sunday, November 27, 2022

ಹರತಾಳು ಗ್ರಾಪಂ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಅಂಗೀಕಾರ


ಹೊಸನಗರ: ತಾಲೂಕಿನ ಹರತಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಕಲ್ಲಿ ಯೋಗೇಂದ್ರ ವಿರುದ್ದ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಅಂಗೀಕಾರಗೊಂಡಿದೆ.


ಇಲ್ಲಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಾಗರ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿತು.


ಒಟ್ಟು 8 ಸದಸ್ಯ ಬಲದ ಈ ಗ್ರಾಮ ಪಂಚಾಯತಿಯಲ್ಲಿ ಆರು ಸದಸ್ಯರು ಅವಿಶ್ವಾಸ ಪರ ಮತ ಚಲಾಯಿಸಿದರು. ಅಧ್ಯಕ್ಷ ಕಲ್ಲಿ ಯೋಗೇಂದ್ರ ಹಾಗೂ ಸದಸ್ಯೆ ಪ್ರೇಮ ಪುರುಷೋತ್ತಮ್ ಸಭೆಗೆ ಗೈರಾಗಿದ್ದರು.

ಕಲ್ಲಿ ಯೋಗೇಂದ್ರ


ಅವಿಶ್ವಾಸದ ಪರ 2/3 ರಷ್ಟು ಸದಸ್ಯರು ಮತ ಚಲಾಯಿಸಿದ ಪರಿಣಾಮ ಅಧ್ಯಕ್ಷ ಕಲ್ಲಿ ಯೋಗೇಂದ್ರ ವಿರುದ್ದ ಅವಿಶ್ವಾಸ ಅಂಗೀಕಾರಗೊಂಡಿದೆ ಎಂದು ವಿಭಾಗಾಧಿಕಾರಿ ಘೋಷಿಸಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಗ್ರಾ.ಪಂ. ಪಿಡಿಒ ಕೆ.ಆರ್. ಚೇತನ್ ಭಾಗಹಿಸಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!