20.6 C
Shimoga
Friday, December 9, 2022

ಹರತಾಳು ಪೀಠಿ ಕೆರೆಗೆ ಮೀನು ಮರಿಗಳ ಬಿತ್ತನೆ

ರಿಪ್ಪನ್‌ಪೇಟೆ: ಸಮೀಪದ ಹರತಾಳು ಪಿಟಿ ಕೆರೆಗೆ ಮೀನು ಮರಿಗಳನ್ನು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಬಿತ್ತನೆ ಮಾಡಿದರು.


ಮೀನು ಮರಿಗಳ ಬಿತ್ತನೆ ನೆರವೇರಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃಧ್ದಿ ಸಂಸ್ಥೆಯವರು ಸಾರಾ ಸಂಸ್ಥೆಯೊಂದಿಗೆ ಬತ್ತಿಹೋದ ಕೆರೆಯನ್ನು ಹೋಳು ತಗೆಯುವ ಮೂಲಕ ಕಳೆದ ಬೇಸಿಗೆಯಲ್ಲಿ ಕೆರೆಯಲ್ಲಿ ಸುಮಾರು 7 ಅಡಿ ನೀರು ಸಂಗ್ರಹವಾಗುವುದರೊಂದಿಗೆ ಸುತ್ತಮುತ್ತಲಿನ ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿಸುವ ಮಹಾತ್ವಾಕಾಂಕ್ಷಿ ಯೋಜನೆಯಿಂದಾಗಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಂತಾಗಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸರ್ಕಾರದಿಂದಾಗದ ಕೆಲವನ್ನು ಧರ್ಮಸ್ಥಳ ಸಂಘದವರು ಮಾಡಿರುವುದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.


ಇತ್ತೀಚಿನ ದಿನಗಳಲ್ಲಿ ಮೀನಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು ಇವುಗಳನ್ನು ಸಾಕಾಣಿಕೆ ಮಾಡಲು ಉತ್ತಮವಾಗಿರುವ ವಿಶಾಲವಾದ ಕೆರೆಯಾಗಿರುವ ನಮ್ಮೂರಿನ ಪಿಟಿ ಕೆರೆಯಲ್ಲಿ ಮೀನುಮರಿಗಳನ್ನು ಬಿತ್ತನೆ ಮಾಡುವುದರೊಂದಿಗೆ ಕೆರೆ ನಿರ್ವಹಣಾ ಸಮಿತಿಯವರು ಮತ್ತು ಗ್ರಾಮಾಡಳಿತ ಆಸಕ್ತಿ ವಹಿಸಿ ಮೀನು ಸಾಕಾಣಿಕೆಯೊಂದಿಗೆ ಆರ್ಥಿಕಾಭಿವೃದ್ದಿ ಹೊಂದಲು ಸಹಕಾರಿಯಾಗುವುದೆಂದರು.


ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಜಿ.ಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಹರತಾಳು ಗ್ರಾಮ ಪಂಚಾಯ್ತಿ ಆಡಳಿತ ವರ್ಗ ಪಂಚಾಯ್ತಿ ಪಿಡಿಓ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಪಕ್ಷದ ಮುಖಂಡರಾದ ಆರ್.ಟಿ.ಗೋಪಾಲ, ಎನ್.ಸತೀಶ್, ಕೆ.ಬಿ.ಹೊವಪ್ಪ, ರಾಮಚಂದ್ರ ಹರತಾಳು ಇನ್ನಿತರರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!