ಹರಿಹರಪುರದಲ್ಲಿ ಏಪ್ರಿಲ್ 10 ರಿಂದ ಕುಂಬಾಭಿಷೇಕ ಕಾರ್ಯಕ್ರಮ

0
287

ಕೊಪ್ಪ: ತಾಲ್ಲೂಕಿನ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 24ರ ವರೆಗೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಶ್ರೀ ಶಾರದಾ ಪರಮೇಶ್ವರಿ ದೇವಸ್ಥಾನಗಳ ಪುನಃ ಪ್ರತಿಷ್ಟಾಪನೆ ಮಹಾ ಕುಂಬಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರತೀ ಮನೆಯಿಂದಲೂ ಕುಟುಂಬ ಸಮೇತರಾಗಿ ಭಕ್ತರು ಬರಬೇಕು ಎಂಬುದು ಪರಮ ಪೂಜ್ಯ ಜಗದ್ಗುರುಗಳ ಆಶಯವಾಗಿದೆ ಎಂದು ಹರಿಹರಪುರ ಶ್ರೀ ಮಠದ ಶ್ರೀಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ ಶಾಸ್ತ್ರಿ ಹೇಳಿದರು.

ಜಯಪುರದ ಹೆಗ್ಗದ್ದೆ ಸುರೇಶ್ ರವರ ಮನೆಯಲ್ಲಿ ನಡೆದ ಮೇಗುಂದಾ ಹೋಬಳಿ ವ್ಯಾಪ್ತಿಯ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಅಗಸ್ತ್ಯ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಪ್ರತ್ಯಕ್ಷ ದರ್ಶನವನ್ನು ಪಡೆದ ತಪಸ್ಸು ಭೂಮಿ ಹರಿಹರಪುರವಾಗಿದ್ದು, ಶಂಕರ ಭಗವತ್ಪಾದರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಶಾರದ ಪರಮೇಶ್ವರಿ ದೇವಾಲಯವು ಇಲ್ಲಿದೆ. ಇಂತಹ ಪುಣ್ಯ ಕ್ಷೇತ್ರದ ಪೀಠಾದೀಶರಾದ ಪರಮಪೂಜ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಂತೆ ಮೇಲಿನ ದಿನಾಂಕಗಳಂದು ಮಾಹಾಕುಂಬಾಭಿಷೇಕ ಸೇರಿದಂತೆ ಅನೇಕ ಯಜ್ಞ ಯಾಗಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸ

ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಅನೇಕ ಗಣ್ಯಾತಿಗಣ್ಯರು ಅಗಮಿಸುವವರಿದ್ದಾರೆ. ಆದರೆ ಸುತ್ತಮುತ್ತಲಿನ ಹತ್ತಾರು ತಾಲೂಕುಗಳ ಪ್ರತೀ ಮನೆಯಿಂದಲೂ ಬಡವ, ಶ್ರೀಮಂತ – ಜಾತಿ, ಪಂಥ ಇತ್ಯಾದಿಗಳ ಭೇದವಿಲ್ಲದೆ ಭಕ್ತರು ಬರಬೇಕು, ಹಾಗೂ ಅವರೆಲ್ಲರ ಮನೆಗಳಿಗೆ ಭೇಟಿ ನೀಡಿ ಮಂತ್ರಾಕ್ಷತೆ ಕೊಟ್ಟು ಕಾರ್ಯಕ್ರಮಕ್ಕೆ ಕರೆಯಬೇಕು ಎಂಬುದು ಪೂಜ್ಯ ಗುರುಗಳ ಅಪೇಕ್ಷೆಯಾಗಿದೆ. ಆದ್ದರಿಂದ ಶ್ರೀ ಮಠದ ಭಕ್ತರಾದ ನಾವುಗಳು ಪ್ರತೀ ಮನೆಗೂ ಭೇಟಿ ನೀಡಿ ಅಕ್ಷತೆಯೊಂದಿಗೆ ಕುಂಬಾಭಿಷೇಕದ ಆಹ್ವಾನ ಪತ್ರಿಕೆಯನ್ನು ಕೊಟ್ಟು ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸಬೇಕು ಎಂದರು. ಆ ಮೂಲಕ ಸಮಾಜದ ಎಲ್ಲರಿಗೂ ಭಗವಂತನ ಆಶೀರ್ವಾದ ಸಿಗಲು ನಾವುಗಳು ಕಾರಣೀಬೂತರಾಗಬೇಕು ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here