ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಅದ್ಧೂರಿ ಸಿದ್ಧತೆ

0
261

ಕೊಪ್ಪ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹರಿಹರಪುರ ಶ್ರೀ ಮಠದಲ್ಲಿ ಹದಿನೈದು ದಿನಗಳ ಕಾಲ ಅದ್ಧೂರಿ ಹಾಗೂ ವೈಭವದಿಂದ ಮಹಾ ಕುಂಭಾಭಿಷೇಕ ಜರುಗಲಿದೆ.

ಕಾರ್ಯಕ್ರಮದ ಅಂಗವಾಗಿ ಭರದಿಂದ ಸಿದ್ಧತೆಗಳು ಸಾಗಿದ್ದು ಪ್ರತಿಯೊಂದು ಕಾರ್ಯಕ್ಕೆ ಶ್ರೀಗಳು ನಿರಂತರವಾಗಿ ಮಾರ್ಗದರ್ಶನ ನೀಡುತ್ತಲಿದ್ದಾರೆ. ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ಕಂಗೊಳಿಸುವಂತೆ ಮಾಡಲಾಗಿದೆ.

ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿರುವ ಶ್ರೀ ಮಠವು ಧರ್ಮಪ್ರಸಾರದ ಜೊತೆಗೆ ಸಾಮಾಜಿಕ ಕ್ಷೇತ್ರ ಹಾಗೂ ಜ್ಞಾನಾರ್ಜನೆಯ ಸಲುವಾಗಿ ಹಲವಾರು ಕಾಯಕಗಳನ್ನು ಮಾಡುತ್ತಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಲಿದೆ.

ಶ್ರೀ ಮಠದಲ್ಲಿ ಈ ಹಿಂದಿನಿಂದಲೂ ಶ್ರೇಷ್ಟವಾದ ಗುರುಪರಂಪರೆಯಿದ್ದು, ಪ್ರಸ್ತುತ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಿಂದ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವು ಇದೀಗ ಮುಗಿಯುವ ಹಂತದಲ್ಲಿದ್ದು ದೇವಾಲಯಗಳ ಪುನಃ ಪ್ರತಿಷ್ಠಾ ಮಹಾಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 10 ರಿಂದ ಏಪ್ರಿಲ್ 24 ರ ವರೆಗೆ ಆಯೋಜನೆಗೊಂಡಿದೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಮಠದಲ್ಲಿ ಆಯೋಜನೆಗೊಂಡಿದ್ದು 15 ಏಪ್ರಿಲ್ 2022 ರ ಶುಕ್ರವಾರ ಶ್ರೀಗಳು ಶಾರದಾ ದೇವಿಗೆ ಮಹಾ ಕುಂಭಾಭಿಷೇಕವನ್ನು ಮಾಡಲಿದ್ದಾರೆ. ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು ನಾಡಿನ ಪ್ರಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here