ಹಳ್ಳಿ ಮಕ್ಕಳ ರಂಗಹಬ್ಬದ ಶಿಬಿರಕ್ಕೆ ವಿದ್ಯುಕ್ತ ಚಾಲನೆಗೆ ಸಿದ್ಧತೆ

0
262

ರಿಪ್ಪನ್‌ಪೇಟೆ: ದಿ.ಎಂ.ಕೆ.ರೇಣುಕಪ್ಪ ಪ್ರತಿಷ್ಠಾನದವರು ಅಯೋಜಿಸಲಾಗಿರುವ ಹಳ್ಳಿಮಕ್ಕಳ ರಂಗಹಬ್ಬದ 15 ದಿನದ ಶಿಬಿರವನ್ನು ವಿದ್ಯುಕ್ತವಾಗಿ ಏಪ್ರಿಲ್ 13 ರಿಂದ ಆರಂಭವಾಗಲಿದ್ದು ಈ ಶಿಬಿರದ ಉದ್ಘಾಟನೆಯನ್ನು ರಂಗಕರ್ಮಿ ಹಾಗೂ ಚಲನ ಚಿತ್ರ ನಟ ಏಸುಪ್ರಕಾಶ್ ಚಾಲನೆ ನೀಡುವರು.

ರಂಗಜಾಥಾಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ, ಪ್ರಗತಿಪರ ಕೃಷಿಕರಾದ ಹಾಲಸ್ವಾಮಿಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಕರ್ನಾಟಕ ಪ್ರಾಂತೀಯ ಹಿಂದು ಸೇನೆಯ ಎಂ.ಬಿ.ಮಂಜುನಾಥ ರಂಗನಿರ್ದೇಶಕ ಡಾ.ಗಣೇಶ್ ಆರ್.ಕೆಂಚನಾಲ ಇನ್ನಿತರರು ಭಾಗವಹಿಸುವರು.

ಈ ಶಿಬಿರವು ಬೇಸಿಗೆ ಕಾಲದಲ್ಲಿ ವಿಶೇಷವಾಗಿ ಮಕ್ಕಳಲ್ಲಿನ ಕಲಿಕಾ ಸಾಮಾರ್ಥ್ಯ ಹಾಗೂ ಕೌಶಲ್ಯದ ಪ್ರಗತಿಗೆ ಈ ಶಿಬಿರವನ್ನು ಅಯೋಜಿಸಲಾಗಿದ್ದು 6 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಹಮ್ಮೊಕೊಳ್ಳಲಾಗಿದ್ದು ಗ್ರಾಮೀಣ ಮಕ್ಕಳು ಈ ಸೌಲಭ್ಯದ ಸದುಪಯೋಗವನ್ನು ಪಡೆಯುವಂತೆ ಅಯೋಜಕರು ಮನವಿ ಮಾಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here