ಹಳ್ಳಿ ಮಕ್ಕಳ ರಂಗಹಬ್ಬ ಶಿಬಿರ ಹಳ್ಳಿಮಕ್ಕಳಿಗೂ ಲಭಿಸಲಿ ; ಮಳಲಿ ಶ್ರೀಗಳು

0
268

ರಿಪ್ಪನ್‌ಪೇಟೆ: ಪಟ್ಟಣ ಪ್ರದೇಶದಲ್ಲಿನ ಮಕ್ಕಳಿಗೆ ಹಲವು ಶಿಬಿರಗಳ ಸೌಲಭ್ಯಗಳು ದೊರಕುತ್ತದೆ ಅದರೆ ಹಳ್ಳಿಯಲ್ಲಿನ ಮಕ್ಕಳಿಗೆ ಇಂತಹ ಸೌಲಭ್ಯಗಳು ದೊರಕದೆ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಗುತ್ತದೆ ಇದರಿಂದ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಸಾಮಾರ್ಥ್ಯ ಹಾಗೂ ಸರ್ವೋತ್ತಮ ಬೆಳವಣಿಗೆಗೆ ತೊಂದರೆಯಾಗುತ್ತಿದ್ದು ಹಳ್ಳಿ ಮಕ್ಕಳಲ್ಲಿರುವ ಸುಪ್ತಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಪಟ್ಟಣದ ಮಕ್ಕಳಂತೆ ಇವರು ಸ್ಪರ್ಧೆಯೊಡ್ಡಲು ಹಿಂಜರಿಯುವುದಿಲ್ಲ ಆ ನಿಟ್ಟಿನಲ್ಲಿ ಹಳ್ಳಿಮಕ್ಕಳ ರಂಗಹಬ್ಬ ಶಿಬಿರವನ್ನು ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ನಡೆಸುವಂತಾಗಬೇಕು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜೀ ಆಶಯ ವ್ಯಕ್ತಪಡಿಸಿದರು.

ದಿ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾತಂಡ ಇವರ ಸಹಯೋಗದಲ್ಲಿ ರಿಪ್ಪನ್‌ಪೇಟೆಯ ಹಿಂದು ಮಹಾಸಭಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಹಳ್ಳಿಮಕ್ಕಳ ರಂಗಹಬ್ಬ 15 ದಿನಗಳ ಮಕ್ಕಳ ಶಿಬಿರದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕ್ಕಳು ದೇವರ ಸಮಾನ ಸುಳ್ಳು – ಸತ್ಯದ ಅರಿವು ಇರುವುದಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಪೋಷಕರು ತಾಯಂದಿರು ಮನೆಯಲ್ಲಿ ಹೇಳಿ ಬೆಳಸಿದಾಗ ಮಾತ್ರ ಉತ್ತಮ ಮಾರ್ಗದಲ್ಲಿ ಸಾಗುತ್ತಾರೆಂಬುದಕ್ಕೆ ಇಂದಿನ ಶಿಬಿರದಲ್ಲಿ ತಮ್ಮ ಮಕ್ಕಳು ಕಡಿಮೆ ಅವಧಿಯಲ್ಲಿ ಹೇಳಿದನ್ನು ಪ್ರದರ್ಶಿಸುತ್ತಿರುವುದು ನೋಡಿದಾಗ ಅರಿವಿಗೆ ಬರುತ್ತದೆಂದರು.

ಪುಟಾಣಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಬಿರಗಳ ಅಗತ್ಯತ್ಯೆ ಇದ್ದು ಅದನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೆಂಚನಾಲ ಗಣೇಶ್ ಕಾರ್ಯ ಪ್ರಶಂಸನೀಯವೆಂದು ಶ್ರೀಗಳು ಹೇಳಿದರು.

ಶಿಬಿರಾರ್ಥಿಗಳ ಅನಿಸಿಕೆಯನ್ನು ಪೋಷಕರಾದ ಶಿಕ್ಷಕಿ ತಾಜುನ್ನಿಸಾ ಷರೀಫ್ ಗಾಳಿಬೈಲು ಮಾತನಾಡಿ, ಜಾತಿ ಬೇದಭಾವನೆ ಇಲ್ಲದೆ ಎಲ್ಲ ಮಕ್ಕಳು ನಮ್ಮವರೆ ಎಂಬ ಭಾವನೆಯಲ್ಲಿ ಇಂತಹ ಶಿಬಿರಗಳು ಅಯೋಜಿಸಿ ಪುಟಾಣಿ ಮಕ್ಕಳ ತೊದಲು ನುಡಿಯನ್ನು ಗಮನಿಸಿ ಅವರಿಗೆ ಭಾಷಾ ಮತ್ತು ಕಲೆಯ ಜ್ಞಾನವನ್ನು ಕೇವಲ 15 ದಿನಗಳಲ್ಲಿ ಕಲಿಸಿದ ಕೀರ್ತಿ ಆರ್.ಗಣೇಶ್ ಸರ್ ರವರಿಗೆ ಸಲ್ಲಬೇಕು ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಿ. ಭೋಜಪ್ಪ, ಬೆಳಕೋಡು ಹಾಲಸ್ವಾಮಿಗೌಡ, ಭೂ ನ್ಯಾಯ ಮಂಡಳಿ ಸದಸ್ಯ ಮೆಣಸೆ ಆನಂದ, ಗಿರೀಶ್ ಜಂಬಳ್ಳಿ, ದಿ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾತಂಡದ ರಂಗ ನಿರ್ದೇಶಕ ಡಾ.ಆರ್.ಗಣೇಶ್ ಕೆಂಚನಾಲ ಭಾಗವಹಿಸಿ ಮಾತನಾಡಿದರು.

ನಂತರ ಶಿಬಿರಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಾಟಕ ಪ್ರದರ್ಶನ ಜರುಗಿತು.

ಗಣೇಶ ಕೆಂಚನಾಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here