ಹಾರನಹಳ್ಳಿಯಲ್ಲಿ ಸಂಭ್ರಮ ಸಡಗರದೊಂದೊಂದಿಗೆ ಬಸವೇಶ್ವರ ಸ್ವಾಮಿಯ ರಥೋತ್ಸವ

0
236

ರಿಪ್ಪನ್‌ಪೇಟೆ: ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಇತಿಹಾಸ ಪ್ರಸಿದ್ದ ಹಾರನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ದಾಭಕ್ತಿಯಂದ ಜನಸಾಗರದಲ್ಲಿ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.

ಕಳೆದ ಎಂಟು ವರ್ಷಗಳಿಂದ ಬಸವೇಶ್ವರ ಸ್ವಾಮಿಯ ರಥೋತ್ಸವವು ಆಚರಣೆ ಮಾಡದೆ ಇದ್ದು ಕೊರೊನಾ ಹಿನ್ನೆಲೆಯಲ್ಲಿ ಮೂರು ವರ್ಷದಿಂದ ದೇಶವೇ ತಲ್ಲಣಗೊಂಡಿದ್ದು ಇದರಿಂದಾಗಿ ರಥೋತ್ಸವಕ್ಕೆ ಹಿನ್ನಡೆಯಾಗಿತು.

ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವವು ಸಂಭ್ರಮ ಸಡಗರದೊಂದಿಗೆ ಭಕ್ತ ಜನಸಾಗರವೇ ಹರಿದು ಬಂದಿದ್ದು ಬಸವಣ್ಣ ದೇವರು ತೇರು ಏರುತ್ತಿದ್ದಂತೆ ಭಕ್ತರ ಜಯ ಘೋಷಣೆ ಬಾಳೆ ಹಣ್ಣು ಸೇವಂತಿಗೆ ಹೂವು ಎಸೆದು ಭಕ್ತಿಯ ಪರಾಕಾಷ್ಟತೆಯನ್ನು ಮೆರೆದರು.

ಯುವಕರು ಅಲ್ಲಿಲ್ಲಿ ಸುತ್ತುವರಿದು ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರೆ ಹೆಣ್ಣು ಮಕ್ಕಳು ಮಹಿಳೆಯರು ರಥೋತ್ಸವದ ಸಂಭ್ರಮವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಅರಿಶಿಣ, ಕುಂಕುಮ, ಬಳೆ ಹೀಗೆ ಹಿಂದು ಪರಂಪರೆಯನ್ನು ಮುಂದಿನ ಯುವಪೀಳಿಗಗೆ ಪರಿಚಯಿಸುವ ಕಾರ್ಯದಲ್ಲಿ ಗಮನ ಸೆಳೆದರು.

ತವರೂರಿನ ದೇವರ ರಥೋತ್ಸವಕ್ಕೆ ದೂರದೂರುಗಳಿಂದ ಮಹಿಳೆಯರು ತಮ್ಮ ಕುಟುಂಬದೊಂದಿಗೆ ಅಗಮಿಸಿದರೆ ಕೆಲವರು ಉದ್ಯೋಗಕ್ಕಾಗಿ ದೂರ ದೂರುಗಳಲ್ಲಿದ್ದರೂ ಕೂಡಾ ಕಛೇರಿಗೆ ರಜೆ ಹಾಕಿ ನಮ್ಮೂರ ಬಸವಣ್ಣ ದೇವರ ರಥೋತ್ಸವಕ್ಕೆ ಬಂದು ಹಣ್ಣು ಕಾಯಿ ಹರಕೆ ಸಮರ್ಪಿಸಿ ದರ್ಶನಾರ್ಶೀವಾದ ಪಡೆದರು.

ಜಾಹಿರಾತು

LEAVE A REPLY

Please enter your comment!
Please enter your name here