ಹಾಸ್ಟೆಲ್ ವಾರ್ಡನ್ ವಿರುದ್ಧ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ

0
2432

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮದಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ವಿರುದ್ದ ಧಿಕ್ಕಾರ ಕೂಗಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು.

ವಸತಿ ನಿಲಯದಲ್ಲಿ ಸರಿಯಾದ ಊಟ ತಿಂಡಿ ನೀಡುವುದಿಲ್ಲ ರುಚಿ ಇರುವುದಿಲ್ಲ ತರಕಾರಿ ತೆಂಗಿನಕಾಯಿ ಬಳಸುವುದಿಲ್ಲ 170 ವಿದ್ಯಾರ್ಥಿಗಳಿಗೆ 1.500 ಲೀಟರ್ ಹಾಲು ಮೆಜ್ಜಿಗೆ ಮಾಂಸವನ್ನು ಮೊಟ್ಟೆಯನ್ನು ಮೆನುವಂತೆ ನೀಡುವುದಿಲ್ಲ ಕೇಳಿದರೆ ಉಡಾಫೆ ಉತ್ತರ ನೀಡಿ ಹೆದರಿಸಿ ಬೆದರಿಸುತ್ತಾರೆಂದು ತಮ್ಮ ಅಸಹಾಯಕತೆಯನ್ನು ತಾಲ್ಲೂಕ್ ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕರ ಬಳಿ ತೋಡಿಕೊಂಡರು.

ಸುಮಾರು 140 ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ದು ಈಗಾಗಲೆ ಹೊಸದಾಗಿ ಪಿಯುಸಿಗೆ ದಾಖಲಾಗಿರುವ ವಿದ್ಯಾರ್ಥಿನಿಯರು ಹಾಸ್ಟೆಲ್‌ಗೆ ದಾಖಲಾಗುತ್ತಿದ್ದು ಸ್ಪಲ್ಟ ಗೊಂದಲವಾಗಿದೆ ಮುಂದಿನ ದಿನಗಳಲ್ಲಿ ಹೀಗೆ ಅವ್ಯವಸ್ಥೆಯಾಗದಂತೆ ಸರಿಪರಿಸುವುದಾಗಿ ಅಧಿಕಾರಿಗಳು ವಿದ್ಯಾರ್ಥಿನಿಯರ ಮನವೊಲಿಕೆಗೆ ಮುಂದಾದರು ಆಗ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆಯ ವಿಷಯ ತಿಳಿದು ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ವಿಚಾರಿಸಿ ಅವರ ದೂರಗಳ ಅರ್ಜಿಯನ್ನು ಪಡೆದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಕ್ಷೇತ್ರದ ಶಾಸಕರು ವಿದ್ಯಾರ್ಥಿ ನಿಲಯದ ಅವ್ಯವಸ್ಥೆಯನ್ನು ಸರಿಪಡಿಸುವ ಬದಲು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಇದೇ ರೀತಿಯಲ್ಲಿ ಕ್ಷೇತ್ರದ ಯಡೆಹಳ್ಳಿಯ ಸರ್ಕಾರಿ ಮೊರಾರ್ಜಿ ವಸತಿ ನಿಲಯದ ವಿದ್ಯಾರ್ಥಿಗಳು ಸಹ ದಿಢೀರ್ ಪ್ರತಿಭಟನೆ ನಡೆಸಿದ್ದು ಇನ್ನೂ ಜನಮಾನಸದಲ್ಲಿ ಮಾಸುವ ಮುನ್ನವೆ ರಿಪ್ಪನ್‌ಪೇಟೆಯಲ್ಲಿ ಈ ರೀತಿ ಪ್ರಸಂಗ ನಡೆದಿರುವುದು ನೋಡಿದರೆ ಶಾಸಕರಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ತಮ್ಮ ಹಣದಾಸೆಯೆ ಹೆಚ್ಚು ಎಂಬುತಾಗಿದೆ ಎಂದು ಟೀಕಿಸಿದರು.

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ವಿರುವ ಕಾರಣ ರಾತ್ರಿ 10 ಗಂಟೆಯವರೆಗೂ ಮೊಬೈಲ್ ಬಳಸುವಂತೆ ಅದೇಶಿಸಬೇಕು,ಚಾಫೆ ಹೊಂದಿಕೆ ಬಟ್ಟೆತೊಳೆಯಲು ಸರಿಯಾದ ಕಟ್ಟೆ ಮಾಡಿಸುವುದು ಕಿಟಕಿ ಗ್ಲಾಸ್‌ಗಳನ್ನು ಭದ್ರಪಡಿಸುವುದು ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳನ್ನು ಈಡೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೂವಪ್ಪ (ಉಮಾಕರ್), ಕೆಂಚನಾಲ ಗ್ರಾ.ಪಂ.ಅ.ಉಬೇದುಲ್ಲ ಷರೀಫ್, ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ, ಗ್ರಾ.ಪಂ. ಸದಸ್ಯರಾದ ಆಸಿಫ್, ಉಲ್ಲಾಸ್, ಉಂಡಗೋಡು ನಾಗಪ್ಪ, ತಾಲ್ಲೂಕ್ ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಮಂಜಪ್ಪ, ರಾಜುಗೌಡ, ಮಂಜಪ್ಪ, ಸಣ್ಣಕ್ಕಿ ಮಂಜು, ವಿದ್ಯಾರ್ಥಿಗಳು ಮತ್ತು ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

ಜಾಹಿರಾತು

LEAVE A REPLY

Please enter your comment!
Please enter your name here