24.3 C
Shimoga
Friday, December 9, 2022

ಹಿಂದು ಎಂಬುದು ಅಶ್ಲೀಲ ಪದ ಎಂದು ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡಿ‌ ; ಉಮೇಶ್ ಕಂಚುಗಾರ್


ಹೊಸನಗರ: ಹಿಂದು ಪದಕ್ಕೆ ಕೆಟ್ಟ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿಯನ್ನು ತಕ್ಷಣ ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಉಮೇಶ್ ಕಂಚುಗಾರ್‌ರವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.


ಹೊಸನಗರದಲ್ಲಿ ತಾಲ್ಲೂಕು ಬಿಜೆಪಿ ಪಕ್ಷದ ವತಿಯಿಂದ ಹಿಂದೂ ಪದಕ್ಕೆ ಬೇರೆ ಅರ್ಥವಿದೆ ಎಂಬ ಹೇಳಿಕೆಗೆ ವಿರೋದಿಸಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡುರವರ ನೇತೃತ್ವದಲ್ಲಿ ಪ್ರತಿಭಟಿಸಿ ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.


ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನದಲ್ಲಿ ಅಲ್ಪ ಸಂಖ್ಯಾತರ ಮತಕ್ಕಾಗಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದು ಅಲ್ಪ ಸಂಖ್ಯಾತರಿಗೂ ಹಿಂದುಗಳಿಗೂ ದ್ವೇಷವನ್ನುಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದು ಭಾರತ ದೇಶದಲ್ಲಿ ಹುಟ್ಟಿದ ಎಲ್ಲರೂ ಅವರವರ ಧರ್ಮಕ್ಕೆ ಅನುಸಾರವಾಗಿ ಧರ್ಮ ಕಾರ್ಯದಲ್ಲಿ ಧರ್ಮಕ್ಕಾನುಗುಣವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ ಆದರೆ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ತೃಪ್ತಿ ಪಡಿಸಲು ಸನಾತನ ಹಿಂದೂ ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಹಿಂದೂ ಎನ್ನೂವ ಶಬ್ದ ಆಶ್ಲೀಲ ಎಂದು ಹೇಳುತ್ತಿದ್ದು ಇದು ಸನಾತನ ಹಿಂದು ದೇಶ, ಹಿಂದು ಧರ್ಮ ಮತ್ತು ಭವ್ಯ ಹಿಂದೂ ಪರಂಪರೆಗೆ ಮಾಡಿದ ಘೋರ ಅಪಮಾನವಾಗಿರುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಹಿಂದೂಗಳಾದ ನಾವು ಒಪ್ಪುವುದಿಲ್ಲ. ಈ ತಕ್ಷಣ ಕೆಪಿಸಿಸಿ ಕಾರ್ಯಧ್ಯಕ್ಷ ಸ್ತಾನಕ್ಕೆ ಹಾಗೂ ಶಾಸಕ ಸ್ಥಾನದಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಪಾಲರು ವಜಾ ಮಾಡಬೇಕೆಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಎ.ವಿ.ಮಲ್ಲಿಕಾರ್ಜುನ, ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಲ್ಪ ಸಂಖ್ಯಾತರನ್ನು ತುಷ್ಟಿಕರಿಸಿ ಸಾಕಷ್ಟು ಹಿಂದೂ ಅಮಾಯಕ ಕಾರ್ಯಕರ್ತರನ್ನು ಕಗ್ಗೊಲೆ ನಡೆದಿತ್ತು ದೇಶ ದ್ರೋಹಿ ಚಟುವಟಿಕೆ ಮಾಡಿದ ಕೆಲವರನ್ನು ಬಂಧಿಸಲಾಗಿತ್ತು ಬಂಧಿತರನ್ನು ಕೇಸಿನಿಂದ ವಜಾಗೊಳಿಸಿ ಜೈಲಿನಿಂದ ಬಿಡುಗಡೆ ಮಾಡುವುದರ ಮೂಲಕ ಹಿಂದು ವಿರೋಧಿಗಳಿಗೆ ದೇಶ ದ್ರೋಹಿಗಳಿಗೆ ಕುಮ್ಮಕ್ಕು ನೀಡಿದ್ದರು. ಈ ಕುಮ್ಮಕಿನಿಂದ ಹಿಂದೂ ವಿರೋಧಿಗಳು ಹಿಂದೂ ವಿರೋದಿ ಚಟುವಟಿಕೆಗಳಲ್ಲಿ ಭಾಗಿಯಾದ ಸಾಕಷ್ಟು ಉದಾಹರಣೆ ನಮ್ಮ ಕಣ್ಣ ಮುಂದೆ ಇದೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಹಿಂದೂ ವಿರೋಧಿಯಾಗಿದ್ದು ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಲಿದೆ ಎಂದರು.

ಈ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಗಣಪತಿ ಬಿಳಗೋಡು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತಳ ಮಟ್ಟದಲ್ಲಿದೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡುತ್ತಾ ಹೋದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ದುಳಿಪಾಠವಾಗಲಿದೆ ತಕ್ಷಣ ಜಾರಕಿಹೊಳಿಯನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಿ ಅದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿರುವ ತಾವು ಹಿಂದುಗಳೆಂಬುದನ್ನು ಮರೆಯಬಾರದು ಎಂದರು.


ಈ ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀಪತಿರಾವ್, ಯಾಸೀರ್, ಗಾಯಿತ್ರಿ ನಾಗರಾಜ್, ಪತ್ರಬರಹಗಾರರಾದ ಶ್ರೀಧರ ಉಡುಪ, ಮಧು, ಸತ್ಯನಾರಾಯಣ ವಿ, ಕಾವೇರಿ ವಿಜಯ ಕುಮಾರ್, ಶಿವಾನಂದ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್, ಉಮೇಶ್, ಪದ್ಮ ಸುರೇಶ್, ಸಂತೋಷ್, ಮಣಿ, ಮಾವಿನಕೊಪ್ಪ, ಗೌತಮ್, ದೇವೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!