ಹಿಂದೂಗಳ ಮನಸ್ಸಿಗೆ ನೋವು ತಂದು ದೇವಸ್ಥಾನಗಳನ್ನು ಕೆಡವಲು ಬಿಜೆಪಿ ಸರ್ಕಾರ ಮುಂದಾದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ: ಬಿ.ಜಿ ಚಂದ್ರಮೌಳಿ

0
418

ಹೊಸನಗರ: ಕರ್ನಾಟಕ ರಾಜ್ಯದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ತಿಳಿದುಕೊಂಡು ಸರ್ಕಾರಿ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡದೇ ಹಿಂದೂ ದೇವಾಲಯಗಳನ್ನು ನೆಲಸಮ ಮಾಡಲು ಹೊರಟಿರುವ ಹಿಂದುತ್ವವಾದಿ ಸರ್ಕಾರವೆಂಬ ಮುಖವಾಡ ಧರಿಸಿಕೊಂಡಿರುವ ಬಿಜೆಪಿ ಸರ್ಕಾರ ಇನ್ನು ಮುಂದೆ ದೇವಸ್ಥಾನಗಳನ್ನು ನೆಲಸಮ ಮಾಡಲು ಹೊರಟರೆ ದೇವಸ್ಥಾನ ಉಳಿಸಲು ನನ್ನ ನೇತೃತ್ವದಲ್ಲಿಯೇ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವೆಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿಚಂದ್ರಮೌಳಿಯವರು ಹೇಳಿದರು.

ಅವರು ಕೋಡೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುತ್ವವೆಂದು ಕೇಂದ್ರ-ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಮೈಸೂರಿನಲ್ಲಿ ದೇವಸ್ಥಾನವನ್ನು ನೆಲಸಮ ಮಾಡುವಾಗ ಎಲ್ಲಿ ಹೋಗಿದ್ದರು? ಚುನಾವಣೆ ಎದುರಿಸುವಾಗ ಮಾತ್ರ ಬಿಜೆಪಿ ಪಕ್ಷದವರಿಗೆ ಹಿಂದೂಗಳ ನೆನಪು ಬರುತ್ತದೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಅನಧಿಕೃತ ದೇವಸ್ಥಾನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ತರಿಸಿಕೊಂಡಿದ್ದು ಹಂತ-ಹಂತವಾಗಿ ನೆಲಸಮ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಅಧಿಕಾರಿ ವರ್ಗದವರು ದೇವಸ್ಥಾನ ನೆಲಸಮ ಮಾಡಲು ಎಲ್ಲ ತಹಶೀಲ್ದಾರ್‌ರೊಂದಿಗೆ ಮೂರು ದಿನಗಳಿಂದ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು ಕರ್ನಾಟಕ ರಾಜ್ಯದಲ್ಲಿ ಯಾವುದೇ ಒಂದು ದೇವಸ್ಥಾನವನ್ನು ಇನ್ನೂ ಮುಂದೆ ನೆಲಸಮ ಮಾಡಲು ಹೊರಟರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here