ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆ..! ಬಜರಂಗದಳದ ಕಾರ್ಯಕರ್ತರಿಂದ ಚಿಕ್ಕಮಗಳೂರು ನಗರ ಬಂದ್

0
1141

ಚಿಕ್ಕಮಗಳೂರು: ಬುಧವಾರ ನಗರದ ಅಯ್ಯಪ್ಪ ನಗರದಲ್ಲಿ ಕಲ್ಲಕ್ಷ ಕಾರಣಕ್ಕೆ ಹಿಂದೂ ಕಾರ್ಯಕರ್ತ ಮನೋಜ್ (22) ಇನ್ನೊಂದು ಕೋಮಿನವರಯ ಮಾರಕಾಸ್ತ್ರಗಳಿದ ಹಲ್ಲೆ ಮಾಡಿದ್ದರು, ಹಲ್ಲೆಗೆ ಒಳಗಾಗಿದ್ದ ಯುವಕನನ್ನು ಸಾರ್ವಜನಿಕರು ನಗರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿಯ ಮೃತ ಪಟ್ಟಿದಾನೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದರು ಆರೋಪಿಗಳ ಬಂಧನಕ್ಕೆ ಸಿಪಿಐ ಸಲೀಂ ನಿರ್ಲಕ್ಷ್ಯ ವಹಿದ್ದಾರೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರಿಂದ ಕೇಲಕಾಲ ನಗರ ಬಂದ್ ಗೆ ಕರೆ ನೀಡಲಾಯಿತು.

ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ ಮಾಡುವುದರ ಜೊತೆಗೆ ಪೋಲಿಸ್ ಸರ್ಕಲ್‌ ಇನ್ಸ್‌ಪೆಕ್ಟರ್ ಸಲೀಂ ವಿರುದ್ಧ ಘೋಷಣೆಯನ್ನು ಕೂಗಿದರು.

ಬಂದ್ ಪರಿಣಾಮ ನಗರದ ಎಂಜಿ ರಸ್ತೆಯ ಬಹುತೇಕ ಅಂಗಡಿ ಮುಂಗಟ್ಟುಗಳು ಕೆಲಕಾಲ ಮುಚ್ಚಿಸಲಾಯಿತ್ತು.‌ ಅಹಿತಕರ ಘಟನೆ ನಿಯಂತ್ರಿಸಲು ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here