ಹಿರಿಯ ನಟ ಶಿವರಾಂಗೆ ಭಾವಪೂರ್ಣ ಶ್ರದ್ಧಾಂಜಲಿ

0
269

ಚಿಕ್ಕಮಗಳೂರು: ಸಿನಿಮಾ ಕ್ಷೇತ್ರದಲ್ಲಿ ಹಿರಿಯ ನಟ ಶಿವರಾಂ ಅವರ ಕಲಾನುಭವ ಅಪಾರವಾಗಿದ್ದು ಅವರ ಅಗಲಿಕೆಯಿಂದ ಸಿನಿಮಾ ಕ್ಷೇತ್ರ ಬಡವಾಗಿದೆ ಎಂದು ತಾಲ್ಲೂಕು ಕಸಾಪ ಪೂರ್ವಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.

ಕೊಟ್ಟಿಗೆಹಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜಾನಪದ ಪರಿಷತ್ತಿನ ವತಿಯಿಂದ ನಡೆದ ನಟ ಶಿವರಾಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವರಾಂ ಅವರು ಹಿರಿಯ ತಲೆಮಾರಿನ ನಟ. ಎಲ್ಲಾ ರೀತಿಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ನಟನೆಯಿಂದ ಮಾತ್ರವಲ್ಲದೇ ವ್ಯಕ್ತಿತ್ವದಿಂದ ಕೂಡ ಗಮನ ಸೆಳೆಯುತ್ತಿದ್ದ ಶಿವರಾಂ ಅವರ ಅಗಲಿಕೆಯಿಂದ ಚಿತ್ರರಂಗ ಉತ್ತಮ ನಟನೊಬ್ಬನನ್ನು ಕಳೆದುಕೊಂಡಿದೆ ಎಂದರು.

ಕನ್ನಡ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್ ಮಾತನಾಡಿ, ಶಿವರಾಂ ಅವರು ಇಡಿ ಚಿತ್ರರಂಗಕ್ಕೆ ಆದರ್ಶವಾಗಿದ್ದವರು. ಅಯ್ಯಪ್ಪಸ್ವಾಮಿ ಆರಾಧಕರಾಗಿದ್ದ ಶಿವರಾಂ ಅವರು ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆಯೂ ಕೂಡ ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರಿಗೂ ಆಪ್ತರಾಗಿದ್ದವರು ಎಂದರು.

ಈ ಸಂದರ್ಭದಲ್ಲಿ ಹೋಬಳಿ ಕಸಾಪ ಪೂರ್ವಾಧ್ಯಕ್ಷ ವಸಂತ್ ಹರ‍್ಗೋಡು, ಸಾಹಿತಿ ಹೆಸಗಲ್ ವೆಂಕಟೇಶ್, ಸ್ಥಳೀಯರಾದ ಜಯಪಾಲ್, ಸಿದ್ದೀಕ್ ಮುಂತಾದವರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here