ಹೀಗೊಂದು ವಿಶಿಷ್ಟ ವಿವಾಹ ಸಮಾರಂಭ !

0
1849

ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾ ಗ್ರಾಮದ ವಾಸಿ ಸೋಗೋಡಿನ ಹೇಮಾ ಹಾಗೂ ದಿ. ವೀರಪ್ಪಗೌಡರ ಪುತ್ರಿ ಅಕ್ಷತಾ ರವರು ಇಂದು ಸಾಗರ ತಾಲೂಕು ಸಿರಿವಂತೆಯ ಭಾರತಿ ಮತ್ತು ಹರೀಶ್ ಗೌಡ ರವರ ಪುತ್ರ ಪ್ರವೀಣ್ ರವರನ್ನು ವಿಶಿಷ್ಟ ರೀತಿಯಲ್ಲಿ ಸಪ್ತಪದಿ ತುಳಿಯುವ ಮೂಲಕ ವರಿಸಿದರು.

ಲಿಂಗಾಯತ ಜನಾಂಗದ ವಿವಾಹ ಪದ್ಧತಿಯಂತೆ ಅವರ ಗುರುಗಳು (ಸ್ವಾಮಿಗಳು) ನೂತನ ವಧು-ವರರಿಗೆ ಸಪ್ತಪದಿ ಮೂಲಕ ದಾಂಪತ್ಯ ಜೀವನವನ್ನು ಹೇಗೆ ಸಾಧಿಸಿಕೊಂಡು ಹೋಗಬೇಕು ಎಂಬ ವಿಧಿ-ವಿಧಾನಗಳನ್ನು ಬ್ಯಾನರ್ ನಲ್ಲಿ ಚಿತ್ರಿಸಿ ಪ್ರತಿಹೆಜ್ಜೆ ಇಡುವ ಮೂಲಕ ಆಚರಿಸಬೇಕು ಎಂಬುದನ್ನು ಬೋಧಿಸಿದರು.

ಆಧುನಿಕತೆಯ ಸರಳ ವಿವಾಹ ಪದ್ಧತಿಯ ನಡುವೆ ಮಾಂಗಲ್ಯಧಾರಣೆ ನಂತರ ಸಾಂಪ್ರದಾಯಿಕವಾಗಿ ವಿವಾಹ ವಿಧಿ-ವಿಧಾನ ಬೋಧಿಸುವ ಮೂಲಕ ಸತಿ-ಪತಿಗಳಾಗಿ ನೆರೆದಿದ್ದ ಬಂಧು-ಮಿತ್ರರ ಹಾಗೂ ಆಪ್ತೇಷ್ಟರ ಬಳಿಗೆ ತೆರಳಿ ಆಶೀರ್ವಾದ ಸ್ವೀಕರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here