ಹುಲಿಕಲ್: ಕೋಣಗಳನ್ನು ಹಿಂಸಾತ್ಮಕವಾಗಿ ಕಳ್ಳಸಾಗಣೆ | ಕಂಟೇನರ್ ಲಾರಿಯಲ್ಲಿದ್ದವು ಬರೋಬ್ಬರಿ 32 ಕೋಣಗಳು!

0
2624

ಹೊಸನಗರ: ಸುಮಾರು 32 ಕೋಣಗಳನ್ನು ಕಂಟೇನರ್ ಲಾರಿಯಲ್ಲಿ ತುಂಬಿ ಹಿಂಸಾತ್ಮಕವಾಗಿ ಅಕ್ರಮವಾಗಿ ಕಳ್ಳ ಸಾಗಾಣೆ ಮಾಡುತ್ತಿದ್ದ ಘಟನೆಯನ್ನು ಪತ್ತೆಹಚ್ಚಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ತಾಲ್ಲೂಕಿನ ಹುಲಿಕಲ್ ಘಾಟಿಯ ಮೇಲಿನಪೇಟೆಯ ಹಳೆಯ‌ ಹೆಂಚಿನ ಕಾರ್ಖಾನೆ ಹತ್ತಿರದ ಭಾಸ್ಕರ್ ಶೆಟ್ಟಿ ಯವರ ಹೋಟೆಲ್ ಮುಂದಿನ ಟಾರ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ 08.45 ರ ಸುಮಾರಿಗೆ ನಗರ ಠಾಣೆ ಎಎಸ್ಐ ಬಿ.ಎಸ್.ಪಾಟೀಲ್ ಮತ್ತು ಸಿಬ್ಬಂದಿಗಳು ವೇಗವಾಗಿ ಬರುತ್ತಿದ್ದ KA 51 1427 ಸಂಖ್ಯೆಯ ಅಶೋಕ ಲೇಲ್ಯಾಂಡ್ ಕಂಟೇನರ್ ಲಾರಿಯನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಒಟ್ಟು 32 ಕೋಣಗಳು ಇರುವುದು ಪತ್ತೆಯಾಗಿದೆ. ಕೋಣಗಳ ಕಾಲು ಕಟ್ಟಿ ಹಿಂಸಾತ್ಮಕವಾಗಿ ಬೇಕಾಬಿಟ್ಟಿಯಾಗಿ ತುಂಬಲಾಗಿತ್ತು ಎನ್ನಲಾಗಿದೆ. ಕೋಣಗಳನ್ನು ತುಂಬಿದ ಲಾರಿಯು ಶಿವಮೊಗ್ಗ ಕಡೆಯಿಂದ ಹುಲಿಕಲ್ ಮಾರ್ಗವಾಗಿ ಉಡುಪಿ-ಮಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಚಾಲಕ ಇಮ್ರಾನ್, ಮಹಮ್ಮದ್ ಗೌಸ್ ಹಾಗೂ ಮೆಹಬೂಬ್ ಎಂಬುವವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಒಟ್ಟು 3,20,000 ರೂ. ಮೌಲ್ಯದ 32 ಕೋಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 8 ಲಕ್ಷ ಮೌಲ್ಯದ KA 51 1427 ಲಾರಿಯನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here