ಹುಲಿಕಲ್ ಘಾಟ್’ನಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ !

0
1598

ಹೊಸನಗರ: ಹೋಂಡಾ ಸಿಟಿ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವ ಘಟನೆ ಹುಲಿಕಲ್ ಘಾಟ್ ನಲ್ಲಿ ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕುಂದಾಪುರ ಕಡೆಯಿಂದ ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು ಎದುರು ಭಾಗದಿಂದ ಬಂದ ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಎದುರು ಭಾಗದಿಂದ ಬಂದ ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತ ಸಂಭವಿಸಿದ ಕ್ಷಣದಲ್ಲಿ ಕಾರಿನ ಎರಡೂ ಏರ್ ಬ್ಯಾಗ್ ಗಳು ಸಕಾಲದಲ್ಲಿ ತೆರೆದುಕೊಂಡ ಪರಿಣಾಮವಾಗಿ ಜೀವಹಾನಿ ತಪ್ಪಿದೆ. ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತ್ತಿದ್ದ ಪ್ರಯಾಣಿಕರೊಬ್ಬರ ಕೈಗೆ ಬಲವಾದ ಪೆಟ್ಟು ಬಿದಿದ್ದೆ ಎಂದು ತಿಳಿದುಬಂದಿದೆ.

ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here