ಹುಲಿ ಉಗುರು ಮಾರಾಟ ಮಾಡುತ್ತಿದ್ದ ಓರ್ವನ, ಬಂಧನ ಇನ್ನೊಬ್ಬ ಪರಾರಿ !

0
3429

ಚಿಕ್ಕಮಗಳೂರು: ನಗರದಲ್ಲಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನನ್ನು ಅರಣ್ಯ ಇಲಾಖೆಯ ಸಂಚಾರಿ ಅರಣ್ಯ ವಲಯ ಅರಣ್ಯಾಧಿಕಾರಿ ತಂಡ ಬಂಧಿಸಿದ್ದಾರೆ.

ಅರಣ್ಯ ಸಂಚಾರಿ ದಳ ವಿಭಾಗದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಮತ್ತು ಅರಣ್ಯಾಧಿಕಾರಿ ವೆಂಕಟೇಶ್ ತಂಡ ಹುಲಿ ಉಗುರು ಮಾರಾಟ ತಂಡವನ್ನು ಭೇದಿಸಿದೆ.

ಉಗುರು ಮಾರಾಟ ಮಾಡುತ್ತಿದ್ದ ಕಲ್ಲದೊಡ್ಡಿ ಇಂದ್ರನಗರ ಹಕ್ಕಿಪಿಕ್ಕಿ ಕಾಲೋನಿಯ ಶೇಖರ್ ನನ್ನು ಹಿರೇಕೊಳಲೆ ರಸ್ತೆಯಲ್ಲಿ ಬಂಧಿಸಿ ಎರಡೂ ಹುಲಿ ಉಗುರು, ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಹುಲಿ ಉಗುರು ಮಾರಾಟ ಮಾಡಲು ನೀಡಿದ ಹುಕ್ಕುಂದ ಗ್ರಾಮದ ಸುಂದರ ತಪ್ಪಿಸಿಕೊಂಡಿದ್ದಾನೆ.

ಹುಕ್ಕುಂದ ಗ್ರಾಮದ ಕಾಫಿ ತೋಟದಲ್ಲಿ ಉರುಳು ಹಾಕಿ ಹುಲಿಯನ್ನು ಸಾಯಿಸಿ ಅದರ ಎರಡು ಉಗುರನ್ನು ಮಾರಾಟ ಮಾಡಿ ಕೊಡಲು ಶೇಖರನಿಗೆ ಹಣ ನೀಡಿದ್ದಾನೆ ಎಂದು ತನಿಖೆಯಲ್ಲಿ ಶೇಖರ್ ಹೇಳಿದ್ದಾನೆ.

ತಪ್ಪಿಸಿಕೊಂಡು ಓಡಿಹೋಗಿ ತಲೆ ಮರೆಸಿಕೊಂಡಿರುವ ಸುಂದರನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮುಂದಾಗಿದ್ದು, ಆತನ ಬಂಧಿಸಿದ ನಂತರವೆ ಹುಲಿ ಹತ್ಯೆಯ ಹೆಚ್ಚಿನ ಮಾಹಿತಿ ದೊರೆಯಲ್ಲಿದೆ.

ಬಂಧಿಸಲಾಗಿರುವ ಶೇಖರ್ ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡೆಸಿ ಹೆಚ್ಚಿನ ವಿಚಾರಣೆಗೆ, ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ನಂದೀಶ್, ದಿನೇಶ್, ಅಶ್ವಥ್,ನಾರಾಯಣ,ವೆಂಕಟೇಶ್ ಅರಣ್ಯರಕ್ಷಕರಾದ ಹೇಮಂತ್, ಕುಮಾಸ್ವಾಮಿ, ಜಯಪ್ರಕಾಶ್, ಈಶ್ವರ್ ಮತ್ತು ವಾಹನ ಚಾಲಕ ಸುನಿಲ್ ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here