ಚಂದ್ರಗುತ್ತಿ: ಯುವ ರಕ್ಷಣಾ ವೇದಿಕೆ (ರಿ) ಯುವಕರು ರೈತರು ಮತ್ತು ವಿದ್ಯಾರ್ಥಿಗಳ ಒಕ್ಕೂಟ ಹುಲ್ತಿಕೊಪ್ಪ ಕಡೇಗದ್ದೆ, ಕೋಣನಮನೆ, ಇವರ ವತಿಯಿಂದ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀ ಕಾಳಿಕಾಂಬ ದೇವಿ ಜಾತ್ರಾ ಪ್ರಯುಕ್ತವಾಗಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ, ಹಾಗೂ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಪುಸ್ತಕ ಲೇಖನಿ ವಿತರಣೆ ಕಾರ್ಯಕ್ರಮ ಶನಿವಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಹೆಚ್. ಗಣಪತಿ, ನಮ್ಮ ಊರಿನ ಯುವಕರು ಬೆಂಗಳೂರು ಮತ್ತು ಹೊರಗಡೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಎಲ್ಲ ಯುವಕರು ಸೇರಿ 17 ವರ್ಷಗಳಿಂದ ಈ ಯುವ ರಕ್ಷಣಾ ವೇದಿಕೆಯನ್ನು ಸಂಘಟನೆ ನಡೆಸಿಕೊಂಡು ಬಂದಿದ್ದು ಈ ಬಾರಿ 18ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಅನಾವರಣ ಮಾಡಿ ಜೊತೆಗೆ ರಕ್ತದಾನ ಶಿಬಿರವನ್ನು ನಡೆಸಿ ಶಾಲಾ ಮಕ್ಕಳಿಗೆ ಪುಸ್ತಕ ಲೇಖನಿ ವಿತರಿಸಿದ್ದು ನಮ್ಮ ಗ್ರಾಮಕ್ಕೆ ಒಂದು ಹೆಮ್ಮೆಯ ವಿಚಾರ ಎಂದು ಹೇಳಿ ಎಲ್ಲಾ ಯುವಕರಿಗೆ ಊರಿನ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ವೇಳೆ ಸುಮಾರು 24 ಯುವಕರು ರಕ್ತದಾನ ಮಾಡಿದರು.
ಆರ್ ಶ್ರೀಧರ್ ಹುಲಿಕೊಪ್ಪ, ಯುವ ರಕ್ಷಣಾ ವೇದಿಕೆ ಅಧ್ಯಕ್ಷ ಎಂ ಗಣಪತಿ, ಹೆಚ್ಚೆ ಗ್ರಾ.ಪಂ ಮಾಜಿ ಅಧ್ಯಕ್ಷ ಪುರುಷೋತ್ತಮ ಎಸ್,ಅರುಣ್ ಕುಮಾರ್, ದೇವರಾಜ್ ಕೋಣನಮನೆ, ಎಸ್ ಡಿ ನಾಯ್ಕ್, ದೇವರಾಜ್ ಹೆಚ್, ಗೋಪಾಲ್, ಅನಿಲ್, ಕೀರ್ತಿ, ಸತೀಶ್, ಮಹೇಶ್ ಮಡಿವಾಳ, ಮಂಜುನಾಥ ಟಿ, ಯುವ ರಕ್ಷಣಾ ವೇದಿಕೆ ಎಲ್ಲಾ ಪದಾಧಿಕಾರಿಗಳು, ಹುಲ್ತಿಕೊಪ್ಪ ಪ್ರಾರ್ಥಮಿಕ ಆರೋಗ್ಯ ಸಿಬ್ಬಂದಿಗಳು ಮತ್ತು ಮೆಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಿಬ್ಬಂದಿಗಳು ಸುತ್ತಮುತ್ತ ಊರಿನ ಗ್ರಾಮಸ್ಥರು ಇದ್ದರು.
Related