ಚಿಕ್ಕಮಗಳೂರು : ಹುಸಿ ದೂರವಾಣಿ ಕರೆಗೆ ಪ್ರಾಮುಖ್ಯತೆ ನೀಡಬಾರದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆ ಚಿಕ್ಕಮಗಳೂರುನಲ್ಲಿ ಪ್ರತಿಕ್ರಿಯಿಸಿ ಅವರು, ಗಾಬರಿಯಾಗುವ ಮಕ್ಕಳು ಪರೀಕ್ಷೆ ಸಮಯದಲ್ಲಿ ಹೆದರುತ್ತಾರೆ, ಯಾರೋ ಎಲ್ಲೋ ಕುಳಿತು ದೂರವಾಣಿಗಳ ಮೂಲಕ ಮಾಡಿರುವ ಕೆಲಸವಿದು.
ಗೃಹ ಇಲಾಖೆ ಎಲ್ಲಾ ಕರೆಯನ್ನು ಗಂಭೀರವಾಗಿ ಪರಿಗಣಿಸಿದೆ, ಎಲ್ಲಾ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಿದರು.
ಹಿಂದೆಯೂ ಈ ರೀತಿಯ ಬೆದರಿಸುವ ಕೆಲಸ ಆಗಿತ್ತು. ತನಿಖೆಯ ಬಳಿಕ ಪರೀಕ್ಷೆಗೆ ತಯಾರಾಗಿಲ್ಲ ಅಂತ ತಾನೇ ಮಾಡಿದ್ದು ಎಂದು ವಿದ್ಯಾರ್ಥಿಯೇ ಒಪ್ಪಿಕೊಂಡಿದ್ದ ಎಂದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ, ಎಲ್ಲಾ ಕಡೆ ಡಾಗ್ ಸ್ಕ್ವಾಡ್ ಹೋಗಿ ಪರಿಶೀಲಿಸಿದೆ ಎಂದು ಹೇಳಿದರು.
Related