ಹೃದಯಾಘಾತದಿಂದ ನಿಧನರಾದ ಪ್ರಾಚಾರ್ಯ ಎಂ.ಹೆಚ್ ಪ್ರಕಾಶ್ ರವರ ದೇಹ ಶಿವಮೊಗ್ಗ ಮೆಡಿಕಲ್ ಸೈನ್ಸ್ ಕಾಲೇಜಿಗೆ ದಾನ

0
6782

ಶಿವಮೊಗ್ಗ: ಹೃದಯಾಘಾತದಿಂದ ಶನಿವಾರ ನಿಧನರಾದ ನಗರದ ರತ್ನಗಿರಿ ಬಡಾವಣೆ ನಿವಾಸಿ ಶಿರಾಳಕೊಪ್ಪ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಹೆಚ್. ಪ್ರಕಾಶ್ (52) ಅವರ ದೇಹವನ್ನು ಶಿವಮೊಗ್ಗ ಮೆಡಿಕಲ್ ಸೈನ್ಸ್ ಕಾಲೇಜಿಗೆ ದಾನ ಮಾಡಲಾಯಿತು.

ಕಳೆದ ಹಲವು ವರ್ಷಗಳಿಂದ ರತ್ನಗಿರಿ ಬಡಾವಣೆ ನಿವಾಸಿಯಾಗಿದ್ದ ಇವರು, ಹೊಸನಗರ ತಾಲೂಕಿನ ಅಮೃತ (ಗರ್ತಿಕೆರೆ) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 14 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಂದ ವರ್ಗಾವಣೆಗೊಂಡ ನಂತರ ಶಿರಾಳಕೊಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಶನಿವಾರ ಬೆಳಿಗ್ಗೆ ಹಠಾತ್ತನೆ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಕುಟುಂಬದವರ ಅಪೇಕ್ಷೆಯಂತೆ ಇವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲೆಂದು ಕಾಲೇಜಿಗೆ ನೀಡಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here