ಹೃದಯಾಘಾತ ; ಎಳನೀರು ವ್ಯಾಪಾರಿ ನಾಗೇಶ್ ಗೌಡ ನಿಧನ

0
2769

ಹೊಸನಗರ: ಎಳನೀರು ವ್ಯಾಪಾರಿ ನಾಗೇಶ್‌ಗೌಡ (57)ರವರು ಹೃದಯಘಾತದಿಂದ ಮಂಗಳವಾರ ಬೆಳಿಗ್ಗೆ ಗಂಗನಕೊಪ್ಪ ತಮ್ಮ ಸ್ವಂತ ನಿವಾಸದಲ್ಲಿ ನಿಧನರಾಗಿದ್ದಾರೆ.

ಇವರು ಎಳನೀರು ವ್ಯಾಪಾರಿಯಾಗಿದ್ದು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಸಂತಾಪ:

ಕಳೂರು ಸೊಸೈಟಿಯ ಅಧ್ಯಕ್ಷರಾದ ದುಮ್ಮ ವಿನಯ್‌ಕುಮಾರ್, ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ವಕೀಲರಾದ ನಂಜುಂಡಪ್ಪ, ಕೊಗಟಿ ರಾಜಶೇಖರಗೌಡ ಹೆಚ್.ಆರ್ ಸುರೇಶ್ ಗೊಂಡ ಗೋವಿಂದಣ್ಣ, ಮಾವಿನಕಟ್ಟೆ ಶಿವಾನಂದ, ಶಿವಪ್ರಕಾಶ್ ಹಾಗೂ ಬೀದಿ ವ್ಯಾಪರಿಗಳ ಸಂಘದ ಅಧ್ಯಕ್ಷ ಸದಸ್ಯರುಗಳು ಇನ್ನೂ ಮುಂತಾದವರು ಮೃತರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಕುಟುಂಬ ವರ್ಗದವರಿಗೆ ಸಂತೈಸಿದರು.

ಜಾಹಿರಾತು

LEAVE A REPLY

Please enter your comment!
Please enter your name here