ಹೃದಯಾಘಾತ ; ಗ್ರಾಮ ಲೆಕ್ಕಾಧಿಕಾರಿ ನಿಧನ !

0
590

ತೀರ್ಥಹಳ್ಳಿ : ಹಾರೋಗೊಳಿಗೆ ಗ್ರಾಮಲೆಕ್ಕಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ರಮೇಶ್ (45) ಸೋಮವಾರ ಮುಂಜಾನೆ ಶಿವಮೊಗ್ಗದ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 15 ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇತ್ತೀಚೆಗೆ ತಾಲೂಕಿನ ಮಾಳೂರು ನಂದಗದ್ದೆ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಮೂಲತಃ ಬೆಂಗಳೂರು ಮೂಲದವರಾದ ಅವರು ಶಿವಮೊಗ್ಗದಲ್ಲಿ ವಾಸವಾಗಿದ್ದರು. ಮುಂಜಾನೆ ಎಂದಿನಂತೆ ಕರ್ತವ್ಯಕ್ಕೆ ಬರಲು ಸ್ನಾನಕ್ಕೆಂದು ತೆರಳಿದಾಗ ಸ್ನಾನ ಗೃಹದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವರದಿ : ಶ್ರೀಕಾಂತ್ ವಿ ನಾಯಕ್
ಜಾಹಿರಾತು

LEAVE A REPLY

Please enter your comment!
Please enter your name here