ಹೃದಯಾಘಾತ ; ಮಂಜುನಾಥ್ ಜಿದ್ದು ಸಾವು !

0
513

ಶಿಕಾರಿಪುರ : ಪಟ್ಟಣದ ಶಾಂತಿನಗರ ವಾಸಿ ಪಿ ಬಿ ಮಂಜುನಾಥ್ ಜಿದ್ದು (52) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಂಗಳವಾರದಂದು ಸಂಜೆ ವೇಳೆಗೆ ಉಸಿರಾಟದಲ್ಲಿ ಏರುಪೇರು ಕಂಡ ಪಟ್ಟ ಕಾರಣ ಸ್ನೇಹಿತರು ಕೂಡಲೇ ಪಟ್ಟಣದ ಅನುಗ್ರಹ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗಿದ್ದಾರೆ ಇಲ್ಲಿಯ ವೈದ್ಯರಿಂದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಶೀಘ್ರದಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪಿ ಬಿ ಮಂಜುನಾಥ್ ರವರು ಹಲವು ವರ್ಷಗಳ ಕಾಲ ಖಾಸಗಿ ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾಗ, ಜಿದ್ದು ಎಂದೇ ಕರೆಯಲ್ಪಡುತ್ತಿದ್ದರು. ನಂತರ ಹಲವು ಪುರೋಹಿತರ ಹೋಮ ಹವನ ಯಜ್ಞ ಯಾಗಾದಿಗಳಲ್ಲಿ ಸಹಾಯ ಮಾಡುತ್ತಿದ್ದ ಇವರು ಇತ್ತೀಚೆಗಷ್ಟೇ ತಾಲ್ಲೂಕು ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದರು. ಮೃದುಮನಸ್ಸಿನ ಶ್ರಮಜೀವಿಯಾದ ಇವರು ಅತಿಹೆಚ್ಚು ಜನಸ್ನೇಹಿಯಾಗಿದ್ದರು. ಜಿದ್ದು ಮಂಜುನಾಥ್ ಪತ್ನಿ ಮೂಕಾಂಬಿಕಾ ಪುತ್ರ ಪಂಕಜ್ ಕುಮಾರ್, ಪುತ್ರಿ ಪ್ರಣಿತಾ ಸಹೋದರರಾದ ರವಿಕುಮಾರ್, ರಾಘವೇಂದ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು, ಸ್ನೇಹಿತರನ್ನು ಅಗಲಿದ್ದಾರೆ.

ನಿಧನರಾದ ಇವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಇವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಗೋಣಿ ಮಾಲತೇಶ್, ಭಂಡಾರಿ ಮಾಲತೇಶ್, ಪುರಸಭಾ ಸದಸ್ಯರಾದ ಉಳ್ಳಿದರ್ಶನ್, ಹುಲ್ಮಾರ್ ಮಹೇಶ್ ಗೋಣಿ ಪ್ರಕಾಶ್, ಮಾಜಿ ಸದಸ್ಯ ಪಾರಿವಾಳದ ಶಿವರಾಂ ಸೇರಿದಂತೆ ಅನೇಕ ಪತ್ರಕರ್ತರು ಖಾಸಗಿ ಬಸ್ ಏಜೆಂಟರು, ಸ್ನೇಹಿತರು ಬಂಧುಗಳು ಮತ್ತು ಹಿತೈಷಿಗಳು ಆಶಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here