ಹೆತ್ತ ತಾಯಿಯನ್ನೇ ಕಪಾಳಕ್ಕೆ ಹೊಡೆದು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಿದ ಪಾಪಿ ಮಗ..!

0
1186

ಶಿವಮೊಗ್ಗ: ಹೆತ್ತ ತಂದೆ ಮತ್ತು ತಾಯಿಯ ಜೊತೆ ಜಗಳವಾಡಿದ ಮಗ ತಾಯಿಗೆ ಕಪಾಳಕ್ಕೆ ಹೊಡೆದು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬುಳ್ಳಾಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ವನಜಾಕ್ಷಿ (45) ಮೃತ ಮಹಿಳೆಯಾಗಿದ್ದು ಈಕೆಯ ಮಗ ದೇವರಾಜ್ (27) ಎಂಬಾತನು ಮನೆಯಲ್ಲಿ ತನ್ನ ತಂದೆ ಮತ್ತು ತಾಯಿಯ ಜೊತೆ ಜಗಳ ತೆಗೆದು ಈ ವೇಳೆ ಕುಪಿತಗೊಂಡು ತಾಯಿಗೆ ಕಪ್ಪಾಳಕ್ಕೆ ಹೊಡೆದು ಕೆಳಕ್ಕೆ ಬೀಳಿಸಿ ಕಾಲಿನಿಂದ ಕುತ್ತಿಗೆಯನ್ನು ತುಳಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಈ ಬಗ್ಗೆ ಮೃತೆಯ ಪತಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here