ಹೈಟೆಕ್ ಶೌಚಾಲಯ ನಿರ್ಮಿಸುವ ನೆಪದಲ್ಲಿ ಈಗ ಶೌಚಾಲಯವಿಲ್ಲದೆ ನಾಗರೀಕರ ಪರದಾಟ

0
729

ರಿಪ್ಪನ್‌ಪೇಟೆ: ಇಲ್ಲಿನ ಸಾರ್ವಜನಿಕ ಸುಲಭ ಶೌಚಾಲಯ ಉಪಯೋಗಕ್ಕಿದ್ದರೂ ಕೂಡಾ ಅದನ್ನು ಗ್ರಾಮಾಡಳಿತ ಹೈಟೆಕ್ ಶೌಚಾಲಯ ನಿರ್ಮಿಸುವ ನೆಪದಲ್ಲಿ ಕೆಡವಲಾಗಿ ಇದಕ್ಕೆ ಹೊಂದಿಕೊಂಡಂತೆ ಖಾಸಗಿ ವ್ಯಕ್ತಿಗಳ ಜಾಗವಿದ್ದು ಈಗ ಶೌಚಾಲಯವನ್ನು ಕೆಡವಿದ ನಂತರದಲ್ಲಿ ಪಂಚಾಯ್ತಿಯವರು 9 ಅಂಡ್ 11 ಸ್ಕೆಚ್ ನೀಡಿ ಗೊಂದಲದ ಗೂಡಾಗಿ ಆಡಳಿತ ವರ್ಗ ಸಾರ್ವಜನಿಕರ ಮುಂದೆ ನಗೆ ಪಾಟಲಿಗೀಡಾಗುವಂತಾಗಿದೆ ಎಂದು ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ ಆಕ್ರೊಶ ವ್ಯಕ್ತಪಡಿಸಿ, ಪಂಚಾಯ್ತಿ ಕಛೇರಿಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆ ವೇಳೆ ಮನವಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ – ಮಂಗಳೂರು – ಉಡುಪಿ – ಕಾರವಾರ ಜಿಲ್ಲೆಗಳನ್ನು ಮತ್ತು ಸಾಗರ – ಶಿವಮೊಗ್ಗ – ಹೊಸನಗರ – ತೀರ್ಥಹಳ್ಳಿ ನಾಲ್ಕು ತಾಲ್ಲೂಕ್‌ ಕೇಂದ್ರಗಳನ್ನು ಸಂಪಕಿಸುವ ಹೃದಯ ಭಾಗದಂತಿರುವ ರಿಪ್ಪನ್‌ಪೇಟೆಯಲ್ಲಿನ ಸಾರ್ವಜನಿಕರ ಸುಲಭ ಶೌಚಾಲಯವನ್ನು ಹೈಟೆಕ್ ಶೌಚಾಲಯವನ್ನಾಗಿ ಮಾಡುವ ಬಗ್ಗೆ ನೀಲನಕ್ಷೆಯನ್ನು ಸಿದ್ದಪಡಿಸಲಾಗಿ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಲಾಗಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿ ಕಾಮಗಾರಿ ಅರಂಭಕ್ಕೂ ಮುನ್ನವೇ ಖಾಸಗಿ ಅಕ್ಕ-ಪಕ್ಕದ ನಿವೇಶನದಾರರು ನ್ಯಾಯಾಲಯದ ಮೆಟ್ಟಿಲು ಏರುವುದರೊಂದಿಗೆ ಗ್ರಾಮಾಡಳಿತಕ್ಕೆ ನೋಟಿಸ್ ನೀಡಿ ತಾತ್ಕಾಲಿಕವಾಗಿ ಕಾಮಗಾರಿಗೆ ತಡೆ ನೀಡಿದ್ದಾರೆಂದು ಮನವಿಯಲ್ಲಿ ವಿವರಿಸಿದ್ದಾರೆ.

ನಿತ್ಯ ರಿಪ್ಪನ್‌ಪೇಟೆ ವಿನಾಯಕ ವೃತ್ತದ ಹೃದಯ ಭಾಗದ ಸರ್ಕಲ್ ಮಾರ್ಗದಲ್ಲಿ ಜೈನರ ದಕ್ಷಣ ಕಾಶಿ ಎಂದು ಪ್ರಖ್ಯಾತಿ ಹೊಂದಿರುವ ಹೊಂಬುಜ ಜೈನಮಠಕ್ಕೆ ಮತ್ತು ಕೊಡಚಾದ್ರಿ ಪರ್ವ ಶ್ರೇಣಿಯ ವೀಕ್ಷಣೆಗೆ ಹಾಗೂ ವಿಶ್ವವಿಖ್ಯಾತ ಜೋಗ್ ಜಲಪಾತ ರಾಮಚಂದ್ರಾಪುರಮಠ ಹೀಗೆ ಹತ್ತು ಹಲವು ಪ್ರೇಕ್ಷಣಿಯ ಕೇಂದ್ರಗಳ ವೀಕ್ಷಣೆಗಾಗಿ ಸಾವಿರಾರು ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರುಗಳು ಸಂಚರಿಸುತ್ತಿದ್ದು ಹಲವರು ವೃದ್ದರು ಮಹಿಳೆಯರು ಅನಾರೋಗ್ಯಪೀಡಿತರು ಶೌಚಾಲಯಕ್ಕಾಗಿ ಪರದಾಡುವ ಸ್ಥಿತಿ ಹೇಳತೀರದಂತಾಗಿದೆ.

ಈ ಬಗ್ಗೆ ಗ್ರಾಮಾಡಳಿತ ತುರ್ತು ಸಾರ್ವಜನಿಕರಿಗಾಗಿ ಸುಲಭಶೌಚಾಲಯವನ್ನು ನಿರ್ಮಿಸುವುದರೊಂದಿಗೆ ಸಾರ್ವಜನಿಕರಿಗೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವತ್ತ ಮುಂದಾಗಬೇಕು ಎಂದು ಮನವಿಯ ಮೂಲಕ ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here