ಹೊಂಬುಜದಲ್ಲಿ ಶರನ್ನವರಾತ್ರಿಯ ಸರಸ್ವತಿ ಪೂಜಾ ಮಹೋತ್ಸವ

0
411

ರಿಪ್ಪನ್‌ಪೇಟೆ: ಸಮೀಪದ ಜೈನರ ದಕ್ಷಿಣ ಕಾಶಿ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಜಗನ್ಮಾತೆ ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಸರಸ್ವತಿ ದೇವಿಯ ಪೂಜಾ ಮಹೋತ್ಸವವು ಜಗದ್ಗುರು ಡಾ.ಶ್ರೀಮದ್ ದೇವೇಂದ್ರ ಕೀರ್ತಿಭಟ್ಟಾರಕ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಜರುಗಿತು.

ನಂತರ ಜಗದ್ಗುರು ಡಾ.ಶ್ರೀಮದ್ ದೇವೇಂದ್ರ ಕೀರ್ತಿಭಟ್ಟಾರಕ ಮಹಾಸ್ವಾಮಿಗಳವರ ಅಶೀರ್ವಚನ ನೀಡಿ ಮನುಷ್ಯ ನಿತ್ಯ ಯಾವುದಾದರೂ ಒಂದು ಗ್ರಂಥವನ್ನು ಪಠಣ ಮಾಡುವುದರಿಂದ ಬದುಕಿನಲ್ಲಿ ಶಾಂತಿ ನೆಮ್ಮದಿ ಕಾಣಬಹುದು. ಸಂಸಾರದ ಜಂಜಾಟದಲ್ಲಿ ಸ್ವಾಧ್ಯಾಯ ಅಗತ್ಯವೆಂದ ಅವರು ಧರ್ಮ ಗ್ರಂಥಗಳಲ್ಲಿ ತಿಳಿಸಿರುವಂತೆ ಲಕ್ಷಾಂತರ ಮನುಷ್ಯರಲ್ಲಿ ಒಬ್ಬಮಾತ್ರ ತನ್ನನ್ನು ತಾನು ಅರಿಯಲು ಪ್ರಯತ್ನಿಸುತ್ತಾನೆ.

ನಮ್ಮ ಪ್ರವೃತ್ತಿಗಳು ಜಲಧಾರೆಯಂತೆ ಇರುತ್ತದೆ. ನೀರನ್ನು ಕೃಷಿಗೆ ವಿದ್ಯುತ್ ತಯಾರಿಕೆಗೆ ಉಪಯೋಗಿಸಬಹುದು ಅದರೆ ಅದನ್ನು ನಿಯಂತ್ರಿಸದಿದ್ದರೆ ದೊಡ್ಡದೊಡ್ಡ ನಗರಗಳೇ ನಾಶವಾಗುವಂತಹ ಕಾಲಬರಬಹುದೆಂದರು.

ನಮ್ಮ ಪ್ರವ್ರತ್ತಿಗಳನ್ನು ನಿಯಂತ್ರಣದಲ್ಲಿಟ್ಟು ಸನ್ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಆಶಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here