ಹೊಂಬುಜದಲ್ಲಿ ಸಂಭ್ರಮದ ಮುಕುಟ ಸಪ್ತಮಿ ಭ|| ಪಾರ್ಶ್ವನಾಥ ಸ್ವಾಮಿಗೆ ಲಡ್ಡು ಸಮರ್ಪಣೆ, ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ; “ಸಾತ್ವಿಕ ಗುಣದಿಂದ ತೀರ್ಥಂಕರರಾಗಿ ಪ್ರಜ್ವಲಿಸಿದವರು ಭಗವಾನ್ ಪಾರ್ಶ್ವನಾಥರು” – ಶ್ರೀಗಳು

0
137

ರಿಪ್ಪನ್‌ಪೇಟೆ : “ಅಂತರಂಗದಲ್ಲಿ ಅಹಿಂಸೆ ಅಳವಡಿಸಿಕೊಂಡು ಪಾಲಿಸುವುದೇ ನಿಜವಾದ ಧರ್ಮ. ಶ್ರಾವಣ ಶುಕ್ಲ ಸಪ್ತಮಿಗೆ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರು ಮೋಕ್ಷಕ್ಕೆ ಹೋದಂತಹ ಪುಣ್ಯ ಕ್ಷಣ. ಭವ-ಭವಗಳಲ್ಲೂ ಕಮಠ ಉಪಸರ್ಗವನ್ನು ಸಹಿಸಿದ ಸಮತಾಮೂರ್ತಿ ಪಾರ್ಶ್ವನಾಥರು. ಕ್ರೋಧಕ್ಕೆ ಪ್ರತಿರೋಧ ತೋರದೇ ತಾಳ್ಮೆಯಿಂದ ಕ್ಷಮೆಯ ಪ್ರತಿರೂಪವಾದರು. ಕೋಪದ ಕೈಗೆ ಮನಸ್ಸನ್ನು ಕೊಡದೆ ವಿವೇಕದಿಂದ ನಿರ್ಣಯ ತೆಗೆದುಕೊಳ್ಳಬೇಕು ಎಂಬುದು ಭಗವತ್ ಸಂದೇಶವಾಗಿದೆ” ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯ ಹೇಳಿದರು.

ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಭ|| ಶ್ರೀ ಪಾರ್ಶ್ವನಾಥ ಸ್ವಾಮಿ ನಿರ್ವಾಣೋತ್ಸವವನ್ನು ಮುಕುಟ ಗುರುವಾರದಂದು ಹೊಂಬುಜದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ ಜರುಗಿ ನಂತರ ಆಶೀರ್ವಚನ ನೀಡಿ, ಪರೋಪಕಾರ ಭಾವನೆ. ಕಷ್ಟ ಕಾರ್ಪಣ್ಯಗಳ ನಡುವೆಯೂ ಸಾತ್ವಿಕ ಗುಣದಿಂದ ತೀರ್ಥಂಕರರಾಗಿ ಪ್ರಜ್ವಲಿಸಿದರು. ತಾಳ್ಮೆ-ಸಹನೆಯನ್ನು ಪಾಲನೆ ಮಾಡಿದರೆ ಯಶಸ್ಸು ಖಂಡಿತ. ಅವರ ನಂತರ ಆಶೀರ್ವಚನ ನೀಡಿದ ಶ್ರೀಗಳು ಶ್ರೀಪಾರ್ಶ್ವನಾಥ ಸ್ವಾಮಿಯ ಜೀವನದಿಂದ ತಿಳಿದು ಬರುವ ಇನ್ನೊಂದು ಸಂಗತಿಯೆಂದರೆ ಆದರ್ಶ ಗುಣಗಳು ಸದಾ ಅನುಕರಿಸಬೇಕು ಎಂದರು. ಮಹಾಭಿಷೇಕ, ಪುಷ್ಪಾರ್ಚನೆ ನೆರವೇರಿತು. ಅಂದು ತ್ರಿಕೂಟ ಜಿನಾಲಯದಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಪೂಜಾ ವಿಧಾನಗಳೊಂದಿಗೆ ಭ|| ಶ್ರೀ ಪಾರ್ಶ್ವನಾಥ ಸ್ವಾಮಿಗೆ ಸಂಪ್ರದಾಯದಂತೆ ನಿರ್ವಾಣ ಲಡ್ಡುವನ್ನು ಸಮರ್ಪಣೆ ಮಾಡಲಾಯಿತು.

ಊರ-ಪರವೂರ ಭಕ್ತಾದಿಗಳು ಸ್ಥಳೀಯ ಶ್ರಾವಕ-ಶ್ರಾವಕಿಯರು ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here