ಹೊಂಬುಜ‌ ; 2ನೇ ಶ್ರಾವಣ ಸಂಪತ್ ಶುಕ್ರವಾರದ ವಿಶೇಷ ಪೂಜೆ, ಅಮ್ಮನವರಿಗೆ ವಿಶೇಷ ಸಿಹಿ ಪದಾರ್ಥ-ಫಲಗಳ ನೈವೇದ್ಯ ಅರ್ಪಣೆ

0
209

ರಿಪ್ಪನ್‌ಪೇಟೆ : ಪೂರ್ವಪರಂಪರೆಯಂತೆ ಶ್ರೀಕ್ಷೇತ್ರ ಹೊಂಬುಜದಲ್ಲಿ ಇಂದು ಎರಡನೇ ಸಂಪತ್ ಶುಕ್ರವಾರದ ಪೂಜೆ-ವರಮಹಾಲಕ್ಷ್ಮೀ ಪೂಜೆ ನೆರವೇರಿತು.

ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನಾಲಯದಲ್ಲಿ ಧಾರ್ಮಿಕ ವಿಧಿಯಂತೆ ಅಭಿಷೇಕ, ಮಹಾಪೂಜೆ ಬಳಿಕ ಜಗನ್ಮಾತೆ ಶ್ರೀಪದ್ಮಾವತಿ ಅಮ್ಮನವರ ಸನ್ನಿದಿಯಲ್ಲಿ ಸರ್ವಾಲಂಕಾರದೊಂದಿಗೆ ವಿಶೇಷ ಪೂಜಾ ವಿಧಾನಗಳು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ನೇತೃತ್ವ, ಮಾರ್ಗದರ್ಶನದಲ್ಲಿ ಜರುಗಿದವು. 108 ಬಗೆಯ ವಿವಿಧ ಸಿಹಿ ಪದಾರ್ಥ-ಫಲಗಳ ನೈವೇದ್ಯ ಅರ್ಪಣೆ ಮಾಡಿಲಾಯಿತು.

ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತವೃಂದದವರು ಶ್ರದ್ಧಾಭಕ್ತಿಯಿಂದ ಜಿನನಾಮ ಸ್ತುತಿಸಿ, ಭಕ್ತಿಕಾಣಿಕೆ ಸಮರ್ಪಿಸಿದರು. ಸಂಪ್ರದಾಯದಂತೆ ಉಡಿ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಆಗಮಿಸಿದ್ದ ಭಕ್ತಾದಿಗಳಿಗೆ ಅಭೀಷ್ಠ ಪ್ರಸಾದ ಭವನದಲ್ಲಿ ಸೂಕ್ತ ಊಟೋಪಚಾರ ಮತ್ತು ನೂತನ ಯಾತ್ರಿ ನಿವಾಸದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here