ಹೊಂಬುಜ ಜೈನ ಮಠದಲ್ಲಿ “ಶುಕ್ರವಾರ ನೋಂಪಿ ಉದ್ಯಾಪನೆ”

0
432

ರಿಪ್ಪನ್‌ಪೇಟೆ: ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಶುಕ್ರವಾರ ನೋಂಪಿ ಉದ್ಯಾಪನೆಯು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಿತು.

ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಇಂದು ಅಯೋಜಿಸಲಾದ ಶುಕ್ರವಾರ ನೋಂಪಿ ಉದ್ಯಾಪನೆಯ ಧರ್ಮ ಸಮಾರಂಭದಲ್ಲಿ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣ್ಯಲಾಭ ಪಡೆದರು.

ಈ ಸಂದರ್ಭದಲ್ಲಿ ನೋಂಪಿ ವ್ರತಧಾರಿಗಳು “ಶ್ರೀ ಶುಕ್ರವಾರ ನೋಂಪಿ ಕಥಾ” ಎಂಬ ಶಾಸ್ತ್ರವನ್ನು ಪೂಜ್ಯ ಸ್ವಾಮೀಜಿಯವರ ಅಮೃತ ಹಸ್ತದಿಂದ ಶಾಸ್ತ್ರದಾನ ಮಾಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here