ಹೊಂಬುಜ: ನ.24 ಮತ್ತು 25 ರಂದು ಲಕ್ಷ ದೀಪೋತ್ಸವ, ಶ್ರೀ ಪಟ್ಟಾಭಿಷೇಕ ವರ್ಧಂತ್ಯೋತ್ಸವ

0
288

ರಿಪ್ಪನ್‌ಪೇಟೆ: ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ನ. 24 ರಂದು ಶ್ರೀ ಭಗಾವನ್ ಪಾರ್ಶ್ವನಾಥ ಮತ್ತು ಜಗನ್ಮಾತೆ ಅಮ್ಮನವರ ಸನ್ನಿಧಿಯಲ್ಲಿ ಬೆಳಗ್ಗೆ 10 ಗಂಟೆಗೆ ಪಂಚಪರಮೇಷ್ಟಿ ವಿಧಿವಿಧಾನ ಸಂಜೆ 6 ಗಂಟೆಗೆ ಲಕ್ಷ ದೀಪೋತ್ಸವ ಮತ್ತು ನ. 25 ರಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಶ್ರೀ ಪಟ್ಟಾಭಿಷೇಕ ಮಹೋತ್ಸವದ 10ನೇ ವರ್ಷದ ವರ್ಧಂತ್ಯೋತ್ಸವವು ಸರಳವಾಗಿ ನೆರವೇರಲಿದೆ.

ಅಂದು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪೂರ್ವಾಹ್ನ ವಿಶೇಷ ಪೂಜೆ, ವಿಧಾನಗಳನ್ನು ಸಮರ್ಪಿಸಲಾಗುವುದು. ನಂತರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸದ್ಧರ್ಮ ಭಕ್ತವೃಂದದವರು ಶ್ರೀಕ್ಷೇತ್ರಕ್ಕಾಗಮಿಸಿ ಲಕ್ಷದೀಪೋತ್ಸವ ಹಾಗೂ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀಗಳವರ ಪ್ರವಚನ, ಗುರುವಂದನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶ್ರೀಕ್ಷೇತ್ರದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ. ಮೊ: 9481453653, 9483801460.

ಜಾಹಿರಾತು

LEAVE A REPLY

Please enter your comment!
Please enter your name here