ಹೊಂಬುಜ ಮಠದಲ್ಲಿ ಸಡಗರ ಸಂಭ್ರಮದಿಂದ ನಡೆದ ಆಯುಧಪೂಜೆ

0
329

ರಿಪ್ಪನ್‌ಪೇಟೆ: ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವಗಳು ಸಂಪ್ರದಾಯದಂತೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅ. 14ರ ಗುರುವಾರದಂದು ಆಯುಧ ಪೂಜಾ ವಿಧಾನಗಳು ನಡೆದವು.

ಕ್ಷೇತ್ರದ ಗಜ, ಕುದುರೆ, ಶ್ರೀಮಠದ ವಾಹನಗಳಿಗೆ ಪೂಜಾ ವಿಧಿ-ವಿಧಾನಗಳು ನಡೆದವು. ಪ್ರತಿದಿನ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಸುವರ್ಣ ಅಲಂಕಾರದೊಂದಿಗೆ ಪೂಜಾ ಮಹೋತ್ಸವಗಳು ನೆರವೇರಿದವು.

ಜಾಹಿರಾತು

LEAVE A REPLY

Please enter your comment!
Please enter your name here