ಹೊಂಬುಜ: ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ನೂತನ ಮಹಾರಥ ಲೋಕಾರ್ಪಣೆ

0
514

ರಿಪ್ಪನ್‌ಪೇಟೆ: ಶತಮಾನಗಳಿಂದ ಪ್ರತಿ ವರ್ಷವು ಪಾಲ್ಗುಣ ಮಾಸದ ಕೃಷ್ಣಪಕ್ಷದಲ್ಲಿ ಬರುವ ಮೂಲನಕ್ಷತ್ರ ದಿವಸ ಅತಿಶಯ ಕ್ಷೇತ್ರದ ಹೊಂಬುಜದ ಭ. ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾರಥೋತ್ಸವ ನಡೆದು ಬಂದಿದೆ.

ಪ್ರಸ್ತುತ ಬ್ರಹ್ಮರಥ (ದೊಡ್ಡ) ವು ಜೀರ್ಣಾವಸ್ಥೆಯಲ್ಲಿದ್ದದ್ದನ್ನು ಗಮನಿಸಿ ಮಾರ್ಚ್. 27, 2019ರ ಅಮ್ಮನವರ ಮಹಾರಥೋತ್ಸವದಂದು ಪ್ರಸಾದ ಬೇಡಿಕೆಗೆ ಅಮ್ಮನವರ ಅನುಗ್ರಹ ದೊರೆತ ಮೇಲೆ ನಿರ್ಮಾಣ ಕಾರ್ಯವು ಜೂನ್ 07, 2019ರ ಶುಭ ಶುಕ್ರವಾರದಂದು ಚಾಲನೆ ದೊರೆಯಿತು. ಪ್ರಸ್ತುತ ಅದರಂತೆ ಮಾರ್ಚ್, 24, 2021ರ ಬುಧವಾರದಂದು ಲೋಕಾರ್ಪಣೆಗೊಂಡಿತು.

ಶಿಲ್ಪಿಗಳಾದ ಕಾರ್ಕಳದ ಸಾಣೂರಿನ ಶ್ರೀ ಪದ್ಮನಾಭ ಆಚಾರಿಯವರ ತಂಡದವರಿಂದ ನಿರ್ಮಾಣಗೊಂಡ ಈ ರಥವು ಏಪ್ರಿಲ್ 03, 2021ರಂದು ನಡೆಯುವ ಮಹಾರಥೋತ್ಸವವು ನೂತನ ಬ್ರಹ್ಮರಥದಲ್ಲಿ ನೆರವೇರಲಿದೆ.

ರಥವು ಪೂರ್ಣವಾಗಿ ಸಾಗವಾನಿ, ಹಲಸು, ಹೊನ್ನೆ, ಬೋಗಿ ಮರಗಳಿಂದ ರೂಪುಗೊಂಡು 1 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ವಿಶೇಷವಾಗಿ ಶ್ರೀಕ್ಷೇತ್ರದ ಇತಿಹಾಸವನ್ನು ಬಿಂಬಿಸುವ ಕಲಾಕೆತ್ತನೆ ಕಸುರಿಗಳಿಂದ ಕೂಡಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಪೂಜ್ಯಶ್ರೀಗಳವರ ಸಂಕಲ್ಪ ಸಿದ್ಧಿಯಂತೆ, ಶಿಲ್ಪಿಗಳ ನುರಿತ ಕಾರ್ಯಕಲ್ಪದಲ್ಲಿ ಸುಂದರ ಕಲಾತ್ಮಕ ಕೆತ್ತನೆಗಳಿಂದ ರಥವು ನಿರ್ಮಾಣಗೊಂಡು ಭವ್ಯ ಇತಿಹಾಸ ಬಿಂಬಿಸಿ, ನವ್ಯತೆಯಲ್ಲಿ ಬಹು ಆಕರ್ಷಣೀಯವೆನಿಸಿದೆ.

ಧರ್ಮಬಾಂಧವರ ಸಹಯೋಗದ ಈ ಭವ್ಯ ಬ್ರಹ್ಮರಥ ಶ್ರೀಜಿನವರರ ಮತ್ತು ಶ್ರೀ ಪದ್ಮಾವತಿ ಅಮ್ಮನವರ ಸೇವೆಗೆ ಸಮರ್ಪಿಸುವ ಅಪೂರ್ವ ಶುಭ ಕಾರ್ಯವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನೆರವೇರಿದೆ.

ಜಾಹಿರಾತು

LEAVE A REPLY

Please enter your comment!
Please enter your name here