ರಿಪ್ಪನ್ಪೇಟೆ: ಹೊಂಬುಜ ಅತಿಶಯ ಮಹಾಕ್ಷೇತ್ರ ಮಹಾಮಾತೆ ಪದ್ಮಾವತಿ ದೇವಿ ಮತ್ತು ಭಗವಾನ್ ಪಾರ್ಶ್ವನಾಥ ಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಇಂದು ಇಂದ್ರಪ್ರತಿಷ್ಟೆ ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿ ಮಂಗಲ, ವಾಸ್ತು ಶಾಂತಿ ಮೃತಿಕ ಸಂಗ್ರಹ ಧಾರ್ಮಿಕ ಕಾರ್ಯಕ್ರಮದ ಮಠದ ಪೀಠಾಧ್ಯಕ್ಷರಾದ ಹೊಂಬುಜ ಜೈನ ಮಠದ ಡಾ.ಜಗದ್ಗುರು ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಜರುಗಿತು.


ಶ್ರೀಗಳು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಜಾತ್ರಾ ಮಹೋತ್ಸವ ಮತ್ತು ಧಾರ್ಮಿಕ ಕಾರ್ಯಗಳು ನಡೆಯದೆ ಇದ್ದು ಈ ಭಾರಿಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ಕಾರಣ ಕೋವಿಡ್ ನಿಯಮವನ್ನು ಪರಿಪಾಲನೆ ಮಾಡುವ ಮೂಲಕ ದೇವಿಯ ದರ್ಶನಾಶೀರ್ವಾದ ಪಡೆಯಲು ಭಕ್ತಾಧಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಇತ್ತೀಚೆಗೆ ನಡೆದ ಹಲವು ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಂಖ್ಯೆ ಸಹ ಗಣನೀಯವಾಗಿ ಏರಿಕೆಯಾಗಿರುವುದನ್ನು ನೋಡಿದರೆ ಭಕ್ತರದಲ್ಲಿ ಧರ್ಮ ಧಾರ್ಮಿಕತೆಯ ಅರಿವು ಹೆಚ್ಚಾದಂತಾಗಿದೆ ಎಂದರು.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಹೊರ ರಾಜ್ಯದ ಹಲವು ಭಕ್ತರು ಪಾಲ್ಗೊಂಡಿದರು.
