20.6 C
Shimoga
Friday, December 9, 2022

ಹೊಂಬುಜ ಶ್ರೀಗಳಿಂದ ಕರ್ಮವೀರ ದೀಪಾವಳಿ ವಿಶೇಷಾಂಕ ಬಿಡುಗಡೆ |
100 ವರ್ಷದ ಜನರ ಜೀವನಾಡಿ ಪತ್ರಿಕೆ ಸಂಯುಕ್ತ ಕರ್ನಾಟಕ, ಕರ್ಮವೀರ ; ಶ್ರೀಗಳು

ರಿಪ್ಪನ್‌ಪೇಟೆ: ಜನರ ಜೀವನಾಡಿ ಪತ್ರಿಕೆ ತನ್ನ ಶತಮಾನೋತ್ಸವದ ಹೊಸ್ತಿಲಿನಲ್ಲಿದ್ದು ಗ್ರಾಮೀಣ ಮೂಲಭೂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಹೊಂಬುಜ ಜೈನ ಮಠದ ಡಾ.ಶ್ರೀಮದ್ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಪತ್ರಿಕೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಹೊಂಬುಜ ಜೈನ ಮಠದಲ್ಲಿ ಇಂದು ಕರ್ಮವೀರ ಕನ್ನಡ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ, ಇದೊಂದು ನಾಡಿನ ಹೆಮ್ಮೆಯ ಪತ್ರಿಕೆಯಾಗಿದ್ದು ವಸ್ತುನಿಷ್ಟ ವರದಿಯೊಂದಿಗೆ ಸಾಮಾಜಿಕವಾಗಿ ಜನಪನವನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಎಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಎಚ್ಚರಿಸುವ ಹಾಗೂ ಸ್ವಾತಂತ್ರ್ಯ ಪೂರ್ವದ ಪತ್ರಿಕೆಯಾಗಿ ಜನಮೆಚ್ಚುಗೆ ಗಳಿಸಿದ ಸಂಗ್ರಹ ಯೋಗ್ಯ ಪತ್ರಿಕೆಯಾಗಿರುವ ಕರ್ಮವೀರ ವಾರಪತ್ರಿಕೆ, ಕಸ್ತೂರಿ ಮಾಸಪತ್ರಿಕೆ ಸಾಹಿತ್ಯ ಸಂಸ್ಕೃತಿ ಕನ್ನಡ ನಾಡು ನುಡಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಓದುಗರ ಮನ ತಣಿಸಿದ ಹೆಗ್ಗಳಿಕೆಯ ಕನ್ನಡದ ಹಿರಿಯಣ್ಣನಾಗಿರುವ ಪತ್ರಿಕೆ ಎಂದರು.


ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಆನಂದ್ ಹಾಗೂ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ಹುಂಚ ಮಠದ ಅಮರ್ ಮತ್ತು ಮಳವಳ್ಳಿ ಗಂಗಾಧರ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಕೆ.ಎಂ.ಬಸವರಾಜ್ ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!