ರಿಪ್ಪನ್ಪೇಟೆ: ಮಹಾಮಾರಿ ಕೊರೊನಾದಿಂದಾಗಿ ಜೈನರ ದಕ್ಷಿಣ ಕಾಶಿ ಹೊಂಬುಜ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾರಥೋತ್ಸವವು ಸರಳ ಸಂಪ್ರದಾಯದಂತೆ ಇಂದು ಜರುಗಿತು.

ಇಂದು 1.15 ನಿಮಿಷದ ಮೂಲಾನಕ್ಷತ್ರದಲ್ಲಿ ಮಹಾಮಾತೆ ಪದ್ಮಾವತಿ ದೇವಿಯು ರಥವನ್ನು ಏರುತ್ತಿದ್ದಂತೆ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕರು ಮಹಾರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿವುದರೊಂದಿಗೆ ಆಶೀರ್ವಚನ ನೀಡಿ, ಜಗತ್ತಿನಲ್ಲಿ ವ್ಯಾಪಿಸಿರುವ ಮಹಾಮಾರಿ ಕೊರೊನಾ ರೋಗವನ್ನು ನಿರ್ಮೂಲನೆ ಮಾಡುವುದರೊಂದಿಗೆ ಭಕ್ತ ಸಮೂಹವನ್ನು ಹರಸು ತಾಯಿ ಎಂದು ಪದ್ಮಾವತಿ ದೇವಿಯಲ್ಲಿ ಪ್ರಾರ್ಥಿಸಿದರು.

ವಿಶ್ವವ್ಯಾಪಿ ಹರಡಿರುವ ಮಾರಕ ರೋಗದಿಂದ ಮುಕ್ತಗೊಳಿಸಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುವಂತೆ ಭಾಗವಹಿಸಿದ ಭಕ್ತರು ದೇವಿಯಲ್ಲಿ ಪ್ರಾರ್ಥನೆ ಮಾಡಿದರು.
