20.6 C
Shimoga
Friday, December 9, 2022

ಹೊನ್ನಕೊಪ್ಪದಲ್ಲಿ ಚೌಡೇಶ್ವರಿ ದೇವಿಯ ಪ್ರತಿಷ್ಟಾಪನೆ ; ಲಿಂಗೈಕ್ಯ ಗುರುಗಳ ಗದ್ದುಗೆ ಉದ್ಘಾಟನೆ


ರಿಪ್ಪನ್‌ಪೇಟೆ: ಸಮೀಪದ ಆಲವಳ್ಳಿ ಗ್ರಾಮದ ಹೊನ್ನಕೊಪ್ಪದಲ್ಲಿ ಚೌಡೇಶ್ವರಿ ದೇವಿಯ ಪ್ರತಿಷ್ಟಾಪನೆ ಮತ್ತು ಲಿಂಗೈಕ್ಯ ಗುರುಗಳ ಗದ್ದುಗೆ ಲೋಕಾರ್ಪಣೆಯ ಕಾರ್ಯಕ್ರಮವು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ದಿವ್ಯಸಾನಿದ್ಯದಲ್ಲಿ ನೆರವೇರಿತು.


ಈ ಧಾರ್ಮಿಕ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಹರಮುನಿದರೂ ಗುರು ಕಾಯ ಎಂಬಂತೆ ಯಾವುದೇ ಧರ್ಮಕಾರ್ಯದಲ್ಲಿ ಗುರುವಿಗೆ ಮೊದಲ ಸ್ಥಾನ ನೀಡಿದ್ದು ಗುರುಗಳಾದವರು ಭಕ್ತರ ಅಣತಿಯಂತೆ ಧರ್ಮದ ಆಚರಣೆಯೊಂದಿಗೆ ಸಮಾಜದ ಸಂಘಟನೆ ವೀರಶೈವ ಲಿಂಗಾಯಿತ ತತ್ವಸಿದ್ದಾಂತದ ಭೋದನೆಯೊಂದಿಗೆ ಆತ್ಮಲಿಂಗವನ್ನು ಧಾರಣೆ ಮಾಡಿದರೆ ಸಾಲದು ನಿತ್ಯ ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದರೊಂದಿಗೆ ನೆಮ್ಮದಿಯಿಂದಿರಲು ಪ್ರೇರಣೆಯಾಗುತ್ತದೆ.


ನಮ್ಮ ಮಕ್ಕಳಿಗೆ ಲಿಂಗಧಾರಣೆಯೊಂದಿಗೆ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ಮಾಡುವ ಹೊಣೆಗಾರಿಕೆಯು ನಮ್ಮ ಪೋಷಕರದಾಗಬೇಕು. ಅವರಿಗೆ ಚಿಕ್ಕವರಿದ್ದಾಗಲೇ ಸಂಸ್ಕೃತಿ ಸಂಸ್ಕಾರದ ಬೀಜವನ್ನು ಬಿತ್ತಿ ಬೆಳೆಸಿದಾಗ ಬದುಕು ಹಸನಾಗುವುದೆಂದರು.


ವೇ.ಮಹೇಶ್‌ಮೂರ್ತಿ ವಿರಕ್ತಮಠ, ಚಂದ್ರಶೇಖರಯ್ಯ ರಿಪ್ಪನ್‌ಪೇಟೆ, ಕುಮಾರಯ್ಯ ಗದಗ ಇನ್ನಿತರ ಪುರೋಹಿತ ವರ್ಗದವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.


ಮಹೇಂದ್ರಗೌಡ ಹೊನ್ನಕೊಪ್ಪ ಮತ್ತು ಕುಟುಂಬದವರನ್ನು ಶ್ರೀಗಳು ಗುರುರಕ್ಷೆ ನೀಡಿ ಸನ್ಮಾನಿಸಿದರು.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೊನ್ನಕೊಪ್ಪ ಮಸರೂರು, ಬೆಳಂದೂರು, ಆಲವಳ್ಳಿ, ಗಾಳಿಬೈಲು, ವಿರಕ್ತಮಠ, ಕೆಂಚನಾಲ ಇನ್ನಿತರ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!