ಹೊಯ್ಸಳರ ದೊರೆ ವಿಷ್ಣುವರ್ಧನ ಸಮಾಧಿ ಪತ್ತೆ !?

0
935

ಮೂಡಿಗೆರೆ: ಹೊಯ್ಸಳರ ಮೂಲ ಸ್ಥಾನ ತಾಲೂಕಿನ ಶಶಕಪುರ ಈಗಿನ ಅಂಗಡಿ ಗ್ರಾಮವಾಗಿದ್ದರೆ. ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನ ಸಮಾಧಿ ಮೂಡಿಗೆರೆ ಪಟ್ಟಣದಿಂದ ಕೆಲವೆ ಮೀಟರ್ ಗಳ ಅಂತರದಲ್ಲಿ ಗೋಚರಿಸಿದೆ ಎಂದು ಹೇಳಲಾಗುತ್ತಿದ್ದು, ಸತ್ಯವೋ, ಸುಳ್ಳೋ ತಿಳಿಯದಾಗಿದೆ.

ಮೂಡಿಗೆರೆಯ ಕೆಲ ಪತ್ರಕರ್ತರು ಶಶಕಪುರದ ಹೊಯ್ಸಳರ ಸಂಪೂರ್ಣ ಇತಿಹಾಸ ಹುಡುಕಲು ಹೊರಟಾಗ ಮೂರು ಪುಸ್ತಕಗಳು ದೊರೆತಿದ್ದು, ಅದನ್ನು ಆಧರಿಸಿ ಹೊರಟಾಗ ರಾಜ ವಿಷ್ಣುವರ್ಧನನ ಸಾವು ಮತ್ತು ಆತನ ಸಮಾಧಿ ಎಲ್ಲಿದೆ ಎಂಬುದು ಗೌಪ್ಯವಾಗಿದ್ದು, ಮತ್ತಷ್ಟು ವಿಷಯವನ್ನು ಕೆದಕಿದಾಗ ವಿಷ್ಣುವರ್ಧನನ ಮೂಲ ರಾಜಧಾನಿ ದ್ವಾರಸಮುದ್ರವಾಗಿದ್ದರೂ. ಉಪರಾಜಧಾನಿಯನ್ನಾಗಿ ಉತ್ತರ ಕರ್ನಾಟಕದ ಬಂಕಾಪುರವನ್ನು ಮಾಡಿಕೊಂಡಿರುವುದು ಕಂಡು ಬಂದಿದೆ.

ಬಂಕಾಪುರದಲ್ಲಿರುವಾಗಲೇ ಕ್ರಿ. ಶ. 1141 ರಲ್ಲಿ ಅಕಾಲ ಮೃತನಾದನೆಂದು, ಆತನ ಕಳೆಬರವನ್ನು ಶಶಕಪುರ (ಅಂಗಡಿ) ಅಥವಾ ಮೂಲರಾಜಧಾನಿ ದ್ವಾರಸಮುದ್ರ(ಹಳೇಬೀಡಿಗೆ ಕೊಂಡೊಯ್ದು ಪಟ್ಟದಾನೆಯ ಮೇಲೆ ಪಾರ್ಥಿವ ಶರೀರವನ್ನಿಟ್ಟು ರಾಜ್ಯ ಕೋಶದೊಂದಿಗೆ ನೂರಾರು ಆಪ್ತರೊಂದಿಗೆ ಮೂಡಿಗೆರೆ ಸುಂಡೇಕೆರೆ ಹಳ್ಳದ ಸಮೀಪ ಬರುವಾಗ ತಳಿಗೆನಾಡಿನ ಮರಿಯಾಳ ಪಳ್ಳಿಯ ಬಿಣ್ಣಗೌಡ ಮತ್ತು ಭೂತೇಗೌಡರು ಶವವನ್ನು ತಡೆದಾಗ. ರಾಜನ ಶವವನು ಸಾಗಿಸುತ್ತಿದ್ದ ಮುಖಂಡ ಬೊಪ್ಪಣ್ಣ ದೇವನಿಗೂ ಇವರಿಗೂ ಕಾಳಗವೇ ನಡೆದು ಅದರಲ್ಲಿ ಎದುರಾಳಿ ಭೂತೇಗೌಡ ಸಾವನ್ನಪ್ಪಿದನೆಂದು ಹೇಳಲಾಗಿದೆ.

ಇದರ ನಡುವೇ ಪಟ್ಟದಾನೆಯನ್ನು ಮತ್ತು ರಾಜಕೋಶವನು ಬಿಣ್ಣಗೌಡ ಕೊಳ್ಳೇಹೊಡೆಯುತ್ತಾನೆ. ಇವೆಲ್ಲದರ ನಡುವೇ ರಾಜ ವಿಷ್ಣುವರ್ಧನನ ಕಳೆಬರವನ್ನು ಸುಂಡೆಕೆರೆ ಹಳ್ಳದಿಂದ 500 ಮೀಟರ್ ದೂರದಲ್ಲಿ ಗುಂಡಿಯನ್ನು ತೋಡಿ ಶವವನ್ನು ಮಣ್ಣುಮಾಡಿ ಅದರ ಗುರುತಾಗಿ ಮೂರು ಅಡಿ ಎತ್ತರದ ನಾಲ್ಕು ಕಲ್ಲುಗಳನ್ನು ನಿಲ್ಲಿಸಲಾಗಿತ್ತೆಂದು ಅದರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಸಿಡಿಲು ಬಡಿದ ಕಾರಣ ಒಂದು ಕಲ್ಲು ಒಡೆದಿದ್ದು, ಇನ್ನುಳಿದ ಮೂರು ಕಲ್ಲುಗಳು ಎಲ್ ಆಕಾರದಲ್ಲಿ ಉಳಿದುಕೊಂಡಿದೆ ಎಂದು ತಿಳಿದುಬಂದಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಇದು ಚಿಕ್ಕಮಗಳೂರು ಜಿಲ್ಲೆಯ ಹವಳ್ಳಿ ಶಾಸನದಲ್ಲಿದೆ ಎಂದು ಪ್ರಕಟವಾಗಿದ್ದು, ಅದನ್ನು ಬೆನ್ನಟ್ಟಿದ ಪತ್ರಕರ್ತರಿಗೆ ಪುಸ್ತಕದಲ್ಲಿ ತಿಳಿಸಿದಂತೆ ಎಲ್ ಆಕಾರದಲ್ಲಿ ಮೂರು ಅಡಿ ಕಲ್ಲುಗಳು ಸುರಕ್ಷಿತವಾಗಿದ್ದು ಸಿಡಿಲಿಗೆ ಬಡಿದ ಕಲ್ಲೊಂದು ಮತ್ತೊಂದು ಕಲ್ಲಿನ ಪಕ್ಕದಲ್ಲೇ ಬಿದ್ದಿದ್ದು ಕಂಡು ಬಂದಿದೆ. ಇದರ ಬಗ್ಗೆ ಸಂಶೋಧನೆ ನಡೆಸುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ.

ರಾಜ ವಿಷ್ಣುವರ್ಧನನ ಸಮಾಧಿಯೂ ಇದೇ ಎಂಬುದು ಹಿರಿಯರಿಗೆ ತಿಳಿದಿತ್ತು ಆದರೆ ಅದನ್ನು ಇಂದಿನ ಯುವ ಪೀಳಿಗೆಗೆ ಹೇಳದೆ ಮುಚ್ಚಿಟ್ಟಿದ್ದು ಒಂದು ದುರಂತವಾದರೆ. ಎಲ್ಲಾ ದೊರೆಗಳ ಸಮಾಧಿಗಳ ಬಗ್ಗೆ ವಿಶ್ಲೇಷಣೆಗಳಿವೆ ಆದರೆ ರಾಜ ವಿಷ್ಟುವರ್ಧನನ ಸಮಾಧಿಬಗ್ಗೆ ಇನ್ನು ಗೌಪ್ಯವಾಗಿರುವುದನ್ನು ಗಮನಿಸಿದರೆ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದಂತಾಗಿದೆ ಎಂದು ಹೇಳಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here