ಹೊಸನಗರದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹಕ್ಕೆ ಚಾಲನೆ

0
344

ಹೊಸನಗರ : ಏ. 14 ರಿಂದ 20ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಅಗ್ನಿಶಾಮಕ ಸೇವಾ ಸಪ್ತಾಹಕ್ಕೆ ಹೊಸನಗರದಲ್ಲಿ ಚಾಲನೆ ನೀಡಲಾಯಿತು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಮನೆಮನೆಗೆ ತೆರಳಿ ಬೆಂಕಿ ಆಕಸ್ಮಿಕದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕರಪತ್ರ ವಿತರಿಸುವ ಮೂಲಕ ಅಗ್ನಿ ಆಕಸ್ಮಿಕದ ಮುನ್ನೆಚ್ಚರಿಕೆ ಮಾಹಿತಿ ಅನುಸರಿಸಬೇಕಾದ ವಿಧಾನ ವಿವರಿಸಿದರು.

ಮನೆಗಳಿಗೆ, ಹುಲ್ಲಿನ ಮೆದೆಗಳಿಗೆ, ಮರದ ರಾಶಿಗೆ ಬೆಂಕಿ ಬಿದ್ದಾಗ ಸಾಕಷ್ಟು ಮರಳು ಅಥವಾ ನೀರನ್ನು ಸಿಂಪಡಿಸಬೇಕು. ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇನ್ನಿತರೆ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗಲಿದಾಗ ನೀರನ್ನು ಸುರಿಯದೆ ಹೆಚ್ಚು ಮರಳನ್ನು ಬಳಸಬೇಕು.

ಒಲೆಯಮೇಲೆ ಇಟ್ಟಿರುವ ಪಾತ್ರೆಗಳನ್ನು ಹೊರತೆಗೆಯಲು ಸೀರೆ ಅಥವಾ ಉಟ್ಟ ಬಟ್ಟೆಯನ್ನು ಉಪಯೋಗಿಸಬಾರದು ಉಟ್ಟ ಬಟ್ಟೆ ಅಥವಾ ಮೈಗೆ ಬೆಂಕಿ ತಗುಲಿದಾಗ ಕೂಡಲೇ ದಪ್ಪ ಬಟ್ಟೆಯನ್ನು ಮೈಗೆ ಸುತ್ತಿ ನೆಲದ ಮೇಲೆ ಎರಡು ಮೂರು ಬಾರಿ ಹೊರಳಾಡಿಸಬೇಕು ನಂತರ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಮಾಡಬೇಕು. ಅಂಗಡಿ ಹೋಟೆಲ್ ವ್ಯಾಪಾರ ಮಳಿಗೆಗಳನ್ನು ರಾತ್ರಿ ಬಾಗಿಲು ಹಾಕುವಾಗ ದೇವರಿಗೆ ಹಚ್ಚಿದ್ದ ದೀಪಗಳನ್ನು ಆರಿಸಲು ಹಾಗೂ ವಿದ್ಯುತ್ ಸಂಪರ್ಕ ತಪ್ಪಿಸಲು ಮರೆಯಬಾರದು.

ಗ್ಯಾಸ್ ಸ್ಟವ್ ಗಳನ್ನು ಯಾವಾಗಲೂ ಸಿಲಿಂಡರ್ ಗಿಂತ ಎತ್ತರದ ಸ್ಥಳಗಳಲ್ಲಿ ಇಟ್ಟು ಅಡುಗೆ ಮಾಡಬೇಕು ಸಿಲಿಂಡರ್ ನಲ್ಲಿ ಉಳಿದ ಅನಿಲವನ್ನು ಬಳಸಲು ಸಿಲಿಂಡರನ್ನು ಓರೆಯಾಗಿ ಅಥವಾ ತಲೆಕೆಳಗು ಮಾಡಿ ಬಳಸಬಾರದು. ಅನಿಲದ ಸೋರಿಕೆ ಕಂಡುಬಂದಲ್ಲಿ ತಕ್ಷಣ ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆಯಲು ಹಾಗೂ ಮನೆಯ ವಿದ್ಯುತ್ ಸಂಪರ್ಕ ತಪ್ಪಿಸಲು ಮರೆಯಬಾರದು.

ಇನ್ನು ಹೆಚ್ಚಿನ ಮಾಹಿತಿಗಳನ್ನು ಹೊಸನಗರ ಅಗ್ನಿಶಾಮಕ ಕಚೇರಿಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ. ರಾಜಪ್ಪ, ಪ್ರಮುಖ ಅಗ್ನಿಶಾಮಕ ಕೆ.ಹೆಚ್. ರಾಜೇಶ, ಅಗ್ನಿಶಾಮಕ ಸಿಬ್ಬಂದಿಗಳಾದ ಟಿ ಮಹಾರಾಜ, ಬಿ.ಸಿ ಆಂಜನೇಯ, ಅಗ್ನಿಶಾಮಕ ವಾಹನ ಚಾಲಕ ಬಿ.ಜೆ ಶಿವರಾಜ್ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದು ಸೂಕ್ತ ಮಾಹಿತಿ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here