ಮುಂಬರುವ ಲೋಕಸಭಾ ಚುನಾವಣೆಗೆ ತಯಾರಾಗಿ ; ಕಾರ್ಯಕರ್ತರಿಗೆ ಕಾಗೋಡು ಕರೆ

0 45

ಶಿಕಾರಿಪುರ : 94ರ ಹಿರಿಯ ವಯಸ್ಸಿನಲ್ಲಿಯೂ ಸಹ ಕಾರ್ಯಕರ್ತರಿಗೆ ಹುರಿದುಂಬಿಸುವ ಸದುದ್ದೇಶದಿಂದ, ಕೈಮುಗಿದು ಕಾಲು ಬಿದ್ದು ಬೇಡುತ್ತೇನೆ ರಾಜ್ಯದ ಸಿದ್ಧರಾಮಯ್ಯರವರ ಸರ್ಕಾರವು ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಯಾರು ನೀಡದ ಪಂಚ ಗ್ಯಾರಂಟಿಗಳ ಕುರಿತು ಮನವರಿಕೆ ಮಾಡುವುದರೊಂದಿಗೆ ಆ ಯೋಜನೆಗಳನ್ನು ಜನತೆಗೆ ತಲುಪಿಸುವುದರ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಾಗಬೇಕು ಎಂದು ಮಾಜಿ ಸಚಿವ, ಡಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿ ಬುಧವಾರ ತಾಲ್ಲೂಕು ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ನೀಡಿದ್ದ, ಪಂಚ ಗ್ಯಾರಂಟಿಗಳಲ್ಲಿ   ಮನೆಯೊಡತಿಗೆ ಎರಡು ಸಾವಿರ ರೂಪಾಯಿ, 200 ಯೂನಿಟ್ ಉಚಿತ ಕರೆಂಟ್, ಮಹಿಳೆಯರಿಗೆ ರಾಜ್ಯಾದ್ಯಂತ‌ ಉಚಿತ ಬಸ್ ಪ್ರಯಾಣ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಉಚಿತ ಹತ್ತು ಕೆಜಿ ಅಕ್ಕಿ ನೀಡುವ ನಾಲ್ಕನ್ನು‌ ಈಡೆರಿಸಿದ್ದು ಮುಂದಿನ ದಿನಗಳಲ್ಲಿ ಇನ್ನೊಂದನ್ನು ಸಹ ಈಡೇರಿಸಲಿದ್ದಾರೆ. ಇದು ಇಡೀ ಹಿಂದು ಸ್ಥಾನದಲ್ಲಿ ಯಾವ ರಾಜ್ಯದ ಯಾವ ಸರ್ಕಾರವು ಜಾರಿಗೆತರದಂತಹ ಯೋಜನೆಯಾಗಿದ್ದು, ಇದರಿಂದಾಗಿ ಆರ್ಥಿಕ ಸದೃಢತೆಯನ್ನು ಹೊಂದದ ಬಡ ಕುಟುಂಬಗಳಿಗೆ ಸಹಾಯ ಒದಗಿಸಿದಂತಾಗಿದ್ದು ಈ ಯೋಜನೆಯಿಂದ ರಾಜ್ಯದ ಜನರಲ್ಲಿ ಸರ್ಕಾರದ ಬಗ್ಗೆ ಉತ್ಸಾಹ ಹಾಗೂ ಹುಮ್ಮಸ್ಸು ಬಂದಂತ್ತಾಗಿದೆಯಲ್ಲದೇ, ಈ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮತ್ತು ಜನತೆಗೆ ತಲುಪಿಸಿ ಮುಂದಿನ ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಎಂದು ಕಾರ್ಯಕರ್ತರಲ್ಲಿ ಕೈಮುಗಿದು ಮತ್ತು ಕಾಲಿಗೆಬಿದ್ದು ಬೇಡುತ್ತೇನೆ ಮುಂದಿನ ಲೋಕಸಭಾ ಚುನಾವಣೆಗೆ ತಯಾರಾಗಬೇಕು ಎಂದರು.   

ಪಕ್ಷದ ಹೊಸ ಕಚೇರಿ ಜನರಲ್ಲಿ ಹೊಸ ಹುರುಪನ್ನು ಹುಟ್ಟು ಹಾಕಿದೆಯಲ್ರದೇ, ವಿರೋಧ ಪಕ್ಷದವರಿಗೆ ಒಂದು ಹೊಸ ಸಂದೇಶವನ್ನು ನೀಡಿದಂತಿಗಿದೆ.  ತಾಲ್ಲೂಕಿನಲ್ಲಿ ಇವರೇ ಶಾಸಕರಾದರೂ ಜಿಲ್ಲೆಯಲ್ಲಿ ಇವರೇ ಸಂಸದರಾಗಿದ್ದರೂ ಕೂಡ ಇಲ್ಲೀಯವರೆಗೆ ತಾಲ್ಲೂಕಿನಲ್ಲಿ ಬಗರ್ ಹುಕುಂ ಅರ್ಜಿಹಾಕಿದ ಒಬ್ಬರೇ ಒಬ್ಬ ರೈತರಿಗೆ ಹಕ್ಕುಪತ್ರ ಕೊಡಿಸಲಿಕ್ಕಾಗಲಿಲ್ಲ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಹಳ್ಳಿಗಳ ಮೇಲೆ ನಗರದಲ್ಲಿ ಪಕ್ಷದ ಪರವಾಗಿ ಸಂಘಟನೆಯನ್ನು ಗಟ್ಟಿಗೊಳಿಸಿ  ಚುನಾವಣೆಯನ್ನು ಗೆದ್ದು ವಿರೋಧ ಪಕ್ಷಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಬಿಜೆಪಿಯವರು ಇಂದು ಜಾತಿ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿದ್ದಾರೆ, ಚುನಾವಣಾ ಹತ್ತಿರವಿದ್ದಂತೆ  ತಮ್ಮ ಸರ್ಕಾರದ ವಿರುದ್ಧದ ಜನಕ್ರೋಶವನ್ನು ತಡೆಯಲು, ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ದೇಶದ ಹೆಸರನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೊಂದು ಹೆಸರನ್ನು ಬದಲಿಸುವ ಇಚ್ಛೆ ಇದ್ದರೆ ವಿಶೇಷ ಸಂಸತ್ ಅಧಿವೇಶನದಲ್ಲೇ ಬಿಲ್ ಪಾಸುಮಾಡಿ ಹೊಸ ಹೆಸರನ್ನು ಇಡಬಹುದಿತ್ತು. ಕಾಗೋಡು ತಿಮ್ಮಪ್ಪನವರು ಎಂದೂ  ಅಧಿಕಾರಕ್ಕಾಗಿ ಹೋರಾಟಗಳನ್ನು ಮಾಡಲಿಲ್ಲ ಆದರೆ ನೊಂದವರ, ತುಳಿತಕ್ಕೆ ಒಳಗದವರ ಪರವಾಗಿ ಹೋರಾಟಗಳನ್ನು ಆರಂಭಿಸಿದ್ದ ಅವರಿಗೆ ಅಧಿಕಾರಗಳು ಮತ್ತು ಪರಷ್ಕಾರಗಳು ಹುಡುಕಿಕೊಂಡು ಬರುವಂತೆ ಮಾಡಿದವು ಎಂದರು. 

ದೇವರಾಜ ಅರಸು ಅವರು ಅಂದು ಶೋಷಿತರ ಹಿಂದುಳಿದವರ ಪರವಾಗಿ ಮೀಸಲಾತಿಯನ್ನು ಜಾರಿಗೆ ತರದಿದ್ದರೆ ಇಂದು ಹಿಂದುಳಿದವರು ಯಾರು ಸರ್ಕಾರಿ  ನೌಕರಿಯಲ್ಲಿ ಇರುತ್ತಿರಲಿಲ್ಲ, ಉಳುವವನೇ ಹೊಲದೊಡೆಯ ಕಾಯ್ದೆ ಜಾರಿಗೆಗೊಳಿಸಿ ತುಳಿತಕ್ಕೊಳ್ಳಗಾದವರ, ದುಡಿಮೆಯೇ ನಂಬಿದವರ ಪರವಾಗಿ ಕಾಯ್ದೆನು ಜಾರಿಗೊಳಿಸಿ ಭೂ ಮಾಲೀಕತ್ವವನ್ನು ದೊರಕಿಸಿಕೊಟ್ಟರು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮಾತನಾಡಿ, ಮೋದಿ ಅವರ ಜನಪ್ರಿಯತೆ ಕಳೆಗುಂದುತ್ತಿದೆ ಅವರ ಕಾರ್ಯಕ್ರಮಗಳು ಜನ ಪರವಾಗಿಲ್ಲಾ ಎಂದರು.  ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ನಾಲ್ಕು ಸಾವಿರ ಕಿ.ಮೀ. ಪಾದಯಾತ್ರೆಯೂ ಜನತೆಯಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ. ಇದರ ಪರಿಣಾಮವಾಗಿ 28 ಪಕ್ಷಗಳು ಎಂದು I.N.D.I.A ಹೆಸರಿನಲ್ಲಿ ಒಗ್ಗೂಡಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್  ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಮಾಜಿ ಭದ್ರಕಾಡ ಅಧ್ಯಕ್ಷ ನಗರದ ಮಹದೇವಪ್ಪ,  ಪುಷ್ಪ ಶಿವಕುಮಾರ್, ಭಂಡಾರಿ  ಮಾಲತೇಶ್, ಚಂದ್ರಪ್ಪ, ಗೋಣಿ ಪ್ರಕಾಶ್, ಚಂದ್ರಕಾಂತ್ ಪಾಟೀಲ್, ಜಾಫರ್ ಅಲಿ, ಸಾ. ನ.ಮಂಜಪ್ಪ, ಉಳಿದರ್ಶನ್, ಪಲ್ಲವಿ, ಡಿ.ಕೆ. ಮೋಹನ್, ಎನ್. ಅರುಣ್, ಗಂಗಾಧರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅರಸು ಪುರಸ್ಕೃತರಾದ ಕಾಗೋಡು  ತಿಮ್ಮಪ್ಪನವರನ್ನು ಸನ್ಮಾನಿಸಲಾಯಿತು. 

ಮಧು ಬಂಗಾರಪ್ಪ ವಿರುದ್ಧ ಕಾರ್ಯಕರ್ತರ ಅಸಮಾಧಾನ..!?
ಪಟ್ಟಣದ ಶಿಶುವಿಹಾರ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯ ಉದ್ಘಾಟನೆ ಸಮಾರಂಭವನ್ನು ನಡೆಸಲಾಯಿತು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಕರೆನೀಡಲಾಗಿತ್ತು. ಕಾರ್ಯಕ್ರಮ ನಡೆಯುವ ಸಮೀಪದಲ್ಲಿಯೇ ಹಾದು ಹೋಗುತ್ತಿದ್ದ ಸಚಿರಯವರನ್ನ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಷ್ಟೇ ಮನವಿ ಮಾಡಿದರೂ ಕಾರಿನಿಂದಿಳಿಯದೆ ಹಾಗೆಯೇ‌ ಹೋದ ಸಚಿವ ಮಧುಬಂಗಾರಪ್ಪರವರ ವಿರುದ್ಧ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷರಾದ ಎಚ್ಎಸ್ ಸುಂದರೇಶ್ ಅವರ ಎದುರಲ್ಲೇ ಅಸಮಾಧಾನವನ್ನು ಹೊರಹಾಕಿದ್ದಾರೆ.

ಪಕ್ಷದ ಕಚೇರಿ ಉದ್ಘಾಟನೆ ನಡೆಯುತ್ತಿರುವ ವಿಚಾರ ತಿಳಿದಿದ್ದರೂ ಕೂಡ ಇದೇ ಮಾರ್ಗದಲ್ಲಿ ಸಂಚರಿಸಿದವರು ಕಾರ್ಯಕರ್ತರು ವಿಧವಿಧವಾಗಿ ಬೇಡಿಕೊಂಡರು ಕಾರಿನಿಂದ ಇಳಿಯದೇ ಕಾರ್ಯಕರ್ತರ ಭಾವನೆಗೆ ಸ್ಪಂದಿಸದೆ ಕಾರ್ಯಕರ್ತರಿಗೆ ನೋವುಂಟು ಮಾಡಿ ಹಾಗೆ ಹೋಗಿದ್ದಾರೆ ಸೌಜನ್ಯಕ್ಕಾದರೂ ಕೆಳಗೆ ಇಳಿಯಬೇಕಿತ್ತು ಇದು ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಸುಲ್ಮರವರು ದುಃಖಿತರಾಗಿ ನೋವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ನೆರದಿದ್ದ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾಗಿ ಮುಗಿಬಿದ್ದು ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ಅವರ ಹಾಕಿದರು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸುಂದರೇಶ್ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ಸಭೆ ಇರುವುದರಿಂದ ಹಾಗೆ ಹೋಗಿದ್ದಾರೆ ಇಲ್ಲಿ ಯಾವುದೇ ಬಣ್ಣದ ರಾಜಕೀಯ ಬೇಡ ಏನಿದ್ದರೂ ಕೂತು ಮಾತಾಡಿ ಸರಿ ಮಾಡಿಕೊಳ್ಳೋಣ ಎಂದರು.

Leave A Reply

Your email address will not be published.

error: Content is protected !!