ಹೊಸನಗರದಲ್ಲಿ ಅತ್ಯಧಿಕ 32 ಸೆಂ.ಮೀ. ಮಳೆ : ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 3.75 ಅಡಿ ನೀರು ಸಂಗ್ರಹ

0
974

ಹೊಸನಗರ: ರಾಜ್ಯದ ಪ್ರಮುಖ ವಿದ್ಯುದಾಗಾರ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ವರುಣನ ಆರ್ಭಟ ಕಳೆದೆರಡು ದಿನಗಳಿಂದ ಜೋರಾಗಿದ್ದು ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತ್ಯಧಿಕ 32 ಸೆಂಟಿಮೀಟರ್ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ :

ಹೊಸನಗರ 315.2 ಮಿ.ಮೀ.

ಸಾವೇಹಕ್ಲು : 276 ಮಿ.ಮೀ.

ಹುಲಿಕಲ್ : 256 ಮಿ.ಮೀ.

ಚಕ್ರಾನಗರ : 206 ಮಿ.ಮೀ.

ಬಿದನೂರು ನಗರ : 193 ಮಿ.ಮೀ.

ಯಡೂರು : 192 ಮಿ.ಮೀ.

ಮಾಣಿ : 172 ಮಿ.ಮೀ

ಮಾಸ್ತಿಕಟ್ಟೆ : 164 ಮಿ.ಮೀ

ಲಿಂಗನಮಕ್ಕಿ : 163.2 ಮಿ.ಮೀ

ಹುಂಚ : 104.6 ಮಿ.ಮೀ

ಅರಸಾಳು : 71.6 ಮಿ.ಮೀ.

ರಿಪ್ಪನ್‌ಪೇಟೆ :54.2 ಮಿ.ಮೀ.

ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ 1769.05 ಅಡಿ ತಲುಪಿದೆ. ಜಲಾಶಯಕ್ಕೆ 57638 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here