ಹೊಸನಗರದಲ್ಲಿ ಏ.27ರಂದು ಬೃಹತ್ ಆರೋಗ್ಯ ಮೇಳ ; ತಾಲ್ಲೂಕಿನ ಎಲ್ಲ ಇಲಾಖೆಯವರು ಸಹಕರಿಸಲು ತಹಶೀಲ್ದಾರ್ ವಿ.ಎಸ್. ರಾಜೀವ್ ಮನವಿ

0
993

ಹೊಸನಗರ: 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹೊಸನಗರ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಏ.27ನೇ ಬುಧವಾರ ಬೃಹತ್ ಆರೋಗ್ಯ ಮೇಳವನ್ನು ಏರ್ಪಡಿಸಲಾಗಿದ್ದು ಈ ಆರೋಗ್ಯ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕೆಂದು ತಹಶೀಲ್ದಾರ್ ವಿ.ಎಸ್. ರಾಜೀವ್‌ರವರು ಹೇಳಿದರು.

ತಾಲ್ಲೂಕು ಕಛೇರಿಯಲ್ಲಿ ಆರೋಗ್ಯ ಮೇಳದ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರೋಗ್ಯಾಧಿಕಾರಿ ಸುರೇಶ್‌ರವರು ಈ ಸಂದರ್ಭದಲ್ಲಿ ಮಾತನಾಡಿ ಏ.27ನೇ ಬುಧವಾರ ಬೆಳಿಗ್ಗೆ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯ ಆವರಣದಲ್ಲಿ ಬೆಳಿಗ್ಗೆ ಬೆಳಿಗ್ಗೆ 9ಗಂಟೆಯಿಂದ 4ಗಂಟೆಯವರೆಗೆ ತಪಾಸಣೆ ನಡೆಯಲಿದ್ದು ಈ ಬೃಹತ್ ಆರೋಗ್ಯ ಮೇಳದಲ್ಲಿ ಹೃದಯ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ವೈದ್ಯಕೀಯ ತಜ್ಞರು, ಕ್ಯಾನ್ಸರ್ ರೋಗ ತಜ್ಞರು, ಮಾನಸಿಕ ರೋಗ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಭಾರತೀಯ ಆಯುಷ್ ವೈದ್ಯ ಪದ್ಧತಿಯ ಸೇವೆಗಳ ತಜ್ಞರು ಆಗಮಿಸಲಿದ್ದು ಉಚಿತ ಪ್ರಯೋಗಾಲಯ ಪರೀಕ್ಷೆ, ಉಚಿತ ಔಷಧಿ ವಿತರಣೆ, ಕ್ಷಯ ರೋಗ ಪರೀಕ್ಷೆ, ಯೋಗ ಮತ್ತು ಧ್ಯಾನ, ಡಿಜಿಟಲ್ ಐಡಿ ಕಾರ್ಡ್ ವಿತರಣೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ಇ-ಸಂಜೀವಿನಿ ಮೂಲಕ ತಜ್ಞರ ಸಂಪರ್ಕ, ಸಕ್ಕರೆ ಕಾಯಿಲೆ ರಕ್ತದೊತ್ತಡ, ನೇತ್ರದಾನ ನೊಂದಣಿ ಕುರಿತು ಮಾಹಿತಿ, ಆರೋಗ್ಯ ಸೇವೆಗಳ ಜಾಗೃತಿ ಇತ್ಯಾದಿ ಸೌಲಭ್ಯಗಳು ಈ ಸಂದರ್ಭದಲ್ಲಿ ಸಿಗಲಿದೆ ಎಂದರು ಸೇವೆಗಳಿಗಾಗಿ ಬರುವ ರೋಗಿಗಳು ಹಿಂದೆ ಯಾವುದಾದರೂ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದರೆ ಅವರು ನೀಡಿದ ಚೀಟಿ ಮತ್ತು ಮಾಹಿತಿಯನ್ನು ತರಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಈ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಬಾಲಚಂದ್ರಪ್ಪ, ಸಿಡಿಪಿಓ ಕಛೇರಿಯಿಂದ ಅಸೀನ, ಚಂದ್ರಕಲಾ, ಆಯೂಷ್ ವೈದ್ಯಾಧಿಕಾರಿ ಡಾ|| ರಾಜೇಶ್ವರಿ ವಿಜಪುರ, ಡಾ|| ಹರೀಶ್ ಹರತಾಳು, ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ರಮೆಶ್ ಆಚಾರ್, ತಾಲ್ಲೂಕು ಕಾರ್ಯಕ್ರಮ ಅಧಿಕಾರಿ ನಿಕಿತ್‌ರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here