ಹೊಸನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 242 ಮಿ.ಮೀ. ಮಳೆ ! ಅಪಾರ ಹಾನಿ

0
1282

ಹೊಸನಗರ: ಮಲೆನಾಡ ಹೃದಯ ಭಾಗವಾದ ಹೊಸನಗರದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ 242 ಮಿ.ಮೀ. ಮಳೆ ದಾಖಲಾಗಿದೆ.

ಭಾರೀ ಮಳೆಗೆ ಶಾಲೆಗಳಿಗೆ ಗುರುವಾರ ರಜಾ ಘೋಷಿಸಲಾಗಿದೆ. ಹಳ್ಳ – ಕೊಳ್ಳ ತಗ್ಗುಪ್ರದೇಶಗಳು ನೀರಿನಿಂದಾವೃತವಾಗಿದೆ. ಹಲವಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ವಿದ್ಯುತ್ ಪೂರೈಕೆ ಸಂಪೂರ್ಣ ಕಡಿತವಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಗಂಗನಕೊಪ್ಪ ಗ್ರಾಮದ ಸರ್ವೇ ನಂಬರ್ 68ರಲ್ಲಿ ಭತ್ತದ ಗದ್ದೆ ಮೇಲು ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಲೇಔಟ್ ಭಾಗದಿಂದ ಬಂದ ಮಳೆನೀರು ಬಡ ಕೂಲಿ ಕೃಷಿ ಕಾರ್ಮಿಕ ಕ್ಲಾಡಿ ಗೊನ್ಸಾಲ್ವಿಸ್ ರವರ ಸುಮಾರು ಎರಡು ಎಕರೆ ಭತ್ತದ ಬೆಳೆ ಕೊಚ್ಚಿಕೊಂಡು ಹೋಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here