ಹೊಸನಗರದಲ್ಲಿ ಕೊಡಚಾದ್ರಿ ಆರೋಗ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ

0
510

ಹೊಸನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಹೊಸನಗರ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶಯವರು ಶ್ವೇತ ಪಾರಿವಾಳವನ್ನು ಹಾರಿಬಿಡುವ ಮೂಲಕ ಟಿ.ಬಿ ಸೋಲಿಸಿ ಶಿವಮೊಗ್ಗ ಗೆಲ್ಲಿಸಿ ಸಂದೇಶ ಸಾರುವ ಶಿವಮೊಗ್ಗ ಜಿಲ್ಲಾ ಮಟ್ಟದ ಎರಡನೇ ಆವೃತ್ತಿಯ ಕೊಡಚಾದ್ರಿ ಆರೋಗ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಅದ್ದೂರಿ ಚಾಲನೆ ನೀಡಿದರು.

ಹೊಸನಗರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಾ‌. ಶಿವಯೋಗಿ, ಡಾ. ಅಶೋಕ್, ಡಾ. ಅನಿಲ್ ಕುಮಾರ್, ಬಸವರಾಜ್ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಯೋಗಶಾಲಾ ತಂತ್ರಜ್ಞ ಸಂಘದ ಹರಿದ್ರಾವತಿ ಶ್ರೀನಿವಾಸ್ ಸ್ವಾಗತಿಸಿದರು. ಅನುಷಾ ಹಾಗೂ ಗಾಯತ್ರಿ ಪ್ರಾರ್ಥಿಸಿದರು.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳ ವೈದ್ಯರು ಸಿಬ್ಬಂದಿ ವರ್ಗದವರು ಕೊಡಚಾದ್ರಿ ಕಪ್ ಸೌಹಾರ್ದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here